(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (1) ರ ಪ್ರಕಾರ, ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ಕಾನೂನುಬದ್ಧವೆಂದು ಪರಿಗಣಿಸಬೇಕು ಮತ್ತು ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ ಎನ್ನಲಾಗಿದೆ.
ಶೈಕ್ಷಣಿಕ ಮತ್ತು ಇತರ ವೆಚ್ಚಗಳನ್ನು ಪೂರೈಸಲು ತಾಯಿಗೆ ತ್ರೈಮಾಸಿಕವಾಗಿ ಬಡ್ಡಿಮೊತ್ತವನ್ನು ನೀಡಬೇಕು, 18 ವರ್ಷ ತುಂಬಿದ ಮೇಲೆ ಹಣ ಸಂದಾಯ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ತಿಳಿದುಬಂದಿದೆ.