20 ಕೋಟಿ ನೀಡಿ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ‌ ಉದ್ಯಮಿ..!!!      

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಕಕೇಶಿಯನ್ ಶೆಫರ್ಡ್ ನಾಯಿಯನ್ನು 20 ಕೋಟಿ ರೂ.ನೀಡಿ ಬೆಂಗಳೂರಿನ‌ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆಂದು ವರದಿಯಾಗಿದೆ. ಸತೀಶ್ ಎಂಬವರು ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರಿಂದ ಈ ಅಪರೂಪದ ನಾಯಿ ಖರೀದಿಸಿದ್ದಾರೆ ಎನ್ನಲಾಗಿದೆ.

ಕಾಡಬೊಮ್ ಹೇಡರ್ ಎಂಬ ಹೆಸರಿನ ಈ ನಾಯಿ, ಅತ್ಯುತ್ತಮ ನಾಯಿ ತಳಿ ವಿಭಾಗದಲ್ಲಿ ಒಟ್ಟು 32 ಪದಕಗಳನ್ನು ಗೆದ್ದಿದೆ. ಸಂಪೂರ್ಣವಾಗಿ ಬೆಳೆದ ಕಕೇಶಿಯನ್ ಶೆಫರ್ಡ್ ಸುಮಾರು 44 ರಿಂದ 77 ಕೆಜಿ ತೂಗುತ್ತದೆ ಮತ್ತು 23 ರಿಂದ 30 ಇಂಚುಗಳಷ್ಟು ಎತ್ತರವನ್ನು ಹೊಂದಿರುತ್ತದೆ. ಇದರ ಜೀವಿತಾವಧಿ 10 ರಿಂದ 12 ವರ್ಷಗಳು ಎಂದು ತಿಳಿದುಬಂದಿದೆ.

Also Read  ಮಸೀದಿಗಳ ಧ್ವನಿವರ್ಧಕ ತೆರವಿಗೆ ಡಿಜಿಪಿ ಆದೇಶಿಸಿಲ್ಲ ➤ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟನೆ

 

error: Content is protected !!
Scroll to Top