ಅನ್ನದಾತನ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ

(ನ್ಯೂಸ್ ಕಡಬ)newskadaba.com ಗದಗ, ಜ.07.  ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಬೆಳೆದಿದ್ದ ಬಾಳೆ ಬೆಳೆ ಬೆಂಕಿಗೆ ಆಹುತಿಯಾಗಿದೆ. ಬಾಳೆ ಬೆಳೆ ಬಂದಿದ್ದರೆ ರೈತರನಿಗೆ ಲಾಭದಾಯಕವಾಗುತ್ತಿತ್ತು. ಆದ್ರೆ ಆಕಸ್ಮಿಕ ಬೆಂಕಿದೆ ಜಮೀನಲ್ಲಿ ಬಾಳೆ ಸುಟ್ಟು ಕರಕಲಾಗಿ ಬಿಟ್ಟಿದ್ದು, ಬಾಳೆ ಬೆಳೆ ಹಾನಿ ಕಂಡು ಅನ್ನದಾತರ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಕಸ್ಮಿಕ ಬೆಂಕಿ‌ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ವರದಿಯಾಗಿದೆ.

ದತ್ತಾತ್ರೆಯ ಕಟ್ಟಿಮನಿ ರವರ ಎರಡುವರೆ ಎಕರೆ ಬಾಳೆ ತೋಟಕ್ಕೆ ಬೆಂಕಿ ತಗುಲಿ ಬಾಳೆ ತೋಟ ನಾಶವಾಗಿದೆ. ತೋಟದ ಪಕ್ಕದ ಪ್ರದೇಶದಲ್ಲಿ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಹುಲ್ಲುಗಾವಲಿನಿಂದ ತೋಟದವರೆಗೆ ಹಬ್ಬಿದ್ದ ಬೆಂಕಿ ಹಬ್ಬಿದೆ. 22 ಪೈಪು, ಹನಿ ನೀರಾವರಿ ಉಪಕರಣ, 2,500 ಸಸಿಗಳಿಗೆ ತಗುಲಿದ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

Also Read  ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದ ನಿರ್ವಾಹಕ ➤ ದಿಢೀರ್ ದಂಡ ವಿಧಿಸಿದ ಉಡುಪಿ ಡಿಸಿ ಜಗದೀಶ್

 

 

error: Content is protected !!
Scroll to Top