ಉತ್ತರ ಪ್ರದೇಶದಲ್ಲೂ ದೆಹಲಿ ಮಾದರಿಯಲ್ಲಿ ರಸ್ತೆ ಅಪಘಾತ…!!!! ➤  ಆರೋಪಿ ಅರೆಸ್ಟ್..

(ನ್ಯೂಸ್ ಕಡಬ)newskadaba.com  ಉತ್ತರ ಪ್ರದೇಶ, ಜ.07. ಉತ್ತರ ಪ್ರದೇಶದಲ್ಲೂ ದೆಹಲಿ ಮಾದರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ.  ಸೈಕಲ್​ನಲ್ಲಿ ತೆರಳುತ್ತಿದ್ದ ಅಪ್ರಾಪ್ತೆ ಮೇಲೆ ಕಾರು ಹರಿದಿದೆ. ಕಾರು ಚಾಲಕ ಅಪ್ರಾಪ್ತೆ ಕಾರಿನಡಿ ಸಿಲುಕಿರುವುದು ತಿಳಿದಿದ್ದರೂ ಕೆಲದೂರದವರೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಈ ಪರಿಣಾಮ ಚಕ್ರದಡಿ ಸಿಲುಕಿದ ಅಪ್ರಾಪ್ತೆಯನ್ನ ಕಾರು ಕೆಲದೂರ ಎಳೆದೊಯ್ದಿದೆ. ಅಪ್ರಾಪ್ತ ಬಾಲಕಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳದಲ್ಲಿದ್ದ ಸ್ಥಳೀಯರು ಕಾರು ಚಾಲಕನಿಗೆ ಬೈದು ಕಾರಿನ ಹಿಂದೆ ಓಡಿದ್ದಾರೆ. ಕಾರು ನಿಂತ ಬಳಿಕ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಾರು ಚಾಲಕನನ್ನು ಥಳಿಸಿದ್ದಾರೆ. ಆಗ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Also Read  ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ - ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ

 

error: Content is protected !!
Scroll to Top