ಕಾಂತಾರ ಹೋಲುವ ಘಟನೆ ➤  ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com ಉಡುಪಿ, ಜ.07. ಕಾಂತಾರ ಸಿನಿಮಾ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದು ಮಾತ್ರವಲ್ಲದೆ, ಕರ್ನಾಟಕದ ಕರಾವಳಿಯ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ್ದು ಸುಳ್ಳಲ್ಲ. ಇದರಲ್ಲಿ ಕಂಡು ಬಂದ ಅದೆಷ್ಟೋ ದೃಶ್ಯಗಳು ನೈಜತೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ದೈವ-ದೇವರ ಮೇಲಿನ ನಂಬಿಕೆ ಇಲ್ಲಿನ ಜನರನ್ನು ಯಾವ ರೀತಿ ಕಾಪಾಡಿಕೊಂಡು ಬಂದಿದೆ ಎಂಬುದನ್ನು ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ ಎನ್ನಲಾಗಿದೆ.

ಇದೀಗ ಕಾಂತಾರ ಸಿನಿಮಾದಲ್ಲಿ ಕಂಡುಬಂದ ದೃಶ್ಯವೊಂದು ನಿಜವಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಅನಾವರಣಗೊಂಡ ದೈವ ಮತ್ತು ಕೋರ್ಟ್ ನ ಸನ್ನಿವೇಶದ ಕಥೆ ಉಡುಪಿಯಲ್ಲಿ ಸಂಭವಿಸಿದೆ. ದೈವದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಸಂಪ್ರದಾಯಬದ್ಧವಾಗಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ನಡೆಯಲಿದೆ ➤ಸಚಿವ ಕೋಟ ಶ್ರೀನಿವಾಸ ಪೂಜಾರಿ

 

error: Content is protected !!
Scroll to Top