ರಾಜ್‌ಕೋಟ್‌ನಲ್ಲಿರುವ ಚೆಕ್ ಡ್ಯಾಮ್ ಶಿಲಾನ್ಯಾಸ ➤ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಹೆಸರು

ನ್ಯೂಸ್ ಕಡಬ) newskadaba.com. ಗುಜರಾತ್‌, ಜ.7. ರಾಜ್‌ಕೋಟ್ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ದಿವಂಗತ ಹೀರಾಬೆನ್ ಅವರ ಹೆಸರನ್ನು ಇಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗಿರ್ ಗಂಗಾ ಪರಿವಾರ ಟ್ರಸ್ಟ್‌, ರಾಜ್‌ಕೋಟ್-ಕಲವಾಡ ರಸ್ತೆಯ ವಗುಡಾದ್ ಗ್ರಾಮದ ಬಳಿ ನ್ಯಾರಿ ನದಿಗೆ ಅಡ್ಡವಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸುತ್ತಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದಿಲೀಪ್ ಸಖಿಯಾ ಹೇಳಿದ್ದಾರೆ. ಸ್ಥಳೀಯ ಶಾಸಕಿ ದರ್ಶಿತಾ ಶಾ ಮತ್ತು ರಾಜ್‌ಕೋಟ್ ಮೇಯರ್ ಪ್ರದೀಪ್ ದಾವ್ ಅವರ ಸಮ್ಮುಖದಲ್ಲಿ ಬುಧವಾರ ಅಣೆಕಟ್ಟಿನ ಶಿಲಾನ್ಯಾಸ ನಡೆದಿತ್ತು.

Also Read  ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ! ➤ ಆರೋಪಿ ಅರೆಸ್ಟ್

“ಪ್ರಧಾನಿ ಮೋದಿ ಅವರ ತಾಯಿಗೆ ಗೌರವಾರ್ಥವಾಗಿ ಈ ಚೆಕ್ ಡ್ಯಾಂಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಡಲು ನಾವು ನಿರ್ಧರಿಸಿದ್ದೇವೆ. ಏಕೆಂದರೆ ಇದನ್ನು ಅವರ ನೆನಪಿಗಾಗಿ ನಿರ್ಮಿಸಲಾಗುತ್ತಿದೆ. ಇದು ಇತರರಿಗೆ ಏನಾದರೂ ಮಾಡಲು ಅಥವಾ ಅವರ ಮರಣದ ನಂತರ ಒಳ್ಳೆಯ ಉದ್ದೇಶಕ್ಕಾಗಿ ದೇಣಿಗೆ ನೀಡಲು ಪ್ರೇರೇಪಿಸುತ್ತದೆ ಎಂದು ಸಖಿಯಾ ಹೇಳಿದ್ದಾರೆ.

error: Content is protected !!
Scroll to Top