ಲಾ ಸ್ಕೂಲ್‌ನಲ್ಲಿ ಶೇ.25ರಷ್ಟು ಮೀಸಲಾತಿ ಕಡ್ಡಾಯ ➤  ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.07. ವಿವಿಯ ಕ್ಯಾಂಪಸ್‌ನಲ್ಲಿರುವ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯಲ್ಲಿ ನಿಯಮಾನುಸಾರ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿಯಡಿ ಶೇ.25 ರಷ್ಟು ಸೀಟುಗಳನ್ನು ಕಡ್ಡಾಯವಾಗಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಕೂಡ ವಿವಿಯ ಕುಲಪತಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಇತರೆ ರಾಜ್ಯಗಳ ರಾಷ್ಟ್ರೀಯ ಕಾನೂನು ವಿವಿಗಳಲ್ಲಿರುವಂತೆ ರಾಜ್ಯದ ಎನ್‌ಎಲ್‌ಎಸ್‌ಐಯು ನಲ್ಲಿ ಸ್ಥಳೀಯ ಮೀಸಲಾತಿ ನಿಯಮ ಜಾರಿಗೊಳಿಸಿ ಎರಡು ವರ್ಷ ಕಳೆದರೂ ಅದನ್ನು ಪಾಲಿಸದೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತೀಚೆಗಷ್ಟೆ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದು, ಇದರ ಬೆನ್ನಲ್ಲೇ ಸಚಿವ ಅಶ್ವತ್ಥ ನಾರಾಯಣ ಕೂಡ ಪತ್ರ ಬರೆದಿದ್ದು, ನ್ಯಾಷನಲ… ಲಾ ಸ್ಕೂಲ… ಯೂನಿವರ್ಸಿಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಶೇ.25ರ ಸ್ಥಳೀಯ ಮೀಸಲಾತಿ ಕೊಡುತ್ತಿಲ್ಲ. ಸರ್ಕಾರದ ನಿಯಮಗಳ ಉಲ್ಲಂಘನೆಯಾಗಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

Also Read  ಕರಡಿ ದಾಳಿ ➤ ರೈತ ಗಂಭೀರ

 

error: Content is protected !!
Scroll to Top