ಗ್ರಾ.ಪಂ ಸದಸ್ಯೆಯ ಮೇಲೆ ಅಧ್ಯಕ್ಷರಿಂದ ದೌರ್ಜನ್ಯ ಆರೋಪ..!! ➤  ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಜ.07. ಕಾಂಗ್ರೇಸ್ ಬೆಂಬಲಿತ ಮಹಿಳಾ ಗ್ರಾಮಪಂಚಾಯತ್ ಸದಸ್ಯೆಯ ಮೇಲೆ ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಂಜಿಕಲ್ಲು ಗ್ರಾ.ಪಂ.ನ ಮುಂಭಾಗದಲ್ಲಿ ಪಂಜಿಕಲ್ಲು ವಲಯ ಕಾಂಗ್ರೆಸ್ ಹಾಗೂ ಗ್ರಾಮಸ್ಥರ ವತಿಯಿಂದ ಪ್ರತಿಭಟನೆ ನಡೆಯಿತು ಎನ್ನಲಾಗಿದೆ.

ಇತ್ತೀಚಿಗೆ ಪಂಜಿಕಲ್ಲು ಗ್ರಾಮದಲ್ಲಿ ಡಾಮರೀಕರಣ ಘಟಕ ನಿರ್ಮಾಣವಾಗುತ್ತಿದ್ದು, ಇದರಿಂದ ಗ್ರಾಮದ ಜನತೆಗೆ ಆರೋಗ್ಯಕ್ಕೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂಬ ನಿಟ್ಟಿನಲ್ಲಿ ಇದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾ.ಪಂ.ಮಹಿಳಾ ಸದಸ್ಯೆ ಮಾಲತಿ ಅವರಿಗೆ ಕೀಳು ಭಾಷೆಯಲ್ಲಿ ಬೈದುದಲ್ಲದೆ ಸಭೆಯಿಂದ ಹೊರ ನಡೆಯುವಂತೆ ಗ್ರಾ.ಪಂ.ಅಧ್ಯಕ್ಷ ಹೇಳಿದ್ದಾರೆ ಇದು ಮಹಿಳಾ ಸದಸ್ಯೆ ಗೆ ಮಾಡಿದ ಅವಮಾನ, ಈ ಘಟನೆಯನ್ನು ವಿರೋಧಿಸಿ ಮಾಜಿ ತಾ.ಪಂ.ಅದ್ಯಕ್ಷ ಸುದರ್ಶನ್ ಜೈನ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು‌ ಎಂದು ತಿಳಿದುಬಂದಿದೆ.

ಅವಮಾನ ಮಾಡಿ ಬಳಿಕ ಸಭೆಯಿಂದ ಹೊರನಡೆಯುವಂತೆ ಬೈದಿರುವ ವಿಡಿಯೋ ಸಿ‌ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡಾಮರೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಸದಸ್ಯೆ ಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಕಣ್ಣೀರು ಹಾಕುವಂತೆ ಮಾಡಿದಕ್ಕೆ ಪೋಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವಪೂಜಾರಿ ಅವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು, ಬಂಧಿಸಿದಿದ್ದರೆ ಮುಂದಿನ‌ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು ಎಂದು ವರದಿಯಾಗಿದೆ.

 

error: Content is protected !!

Join the Group

Join WhatsApp Group