ಕಡಬ: ಕಾಮಕೇಳಿಯಲ್ಲಿ ತೊಡಗಿದ್ದ ನಾಲ್ವರು ಪೊಲೀಸ್ ವಶಕ್ಕೆ ► ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಡಿ.09. ಒಬ್ಬಾಕೆ ಮಹಿಳೆಯೊಂದಿಗೆ ಆರು ಯುವಕರು ಕಾಮಕೇಳಿಯಲ್ಲಿ ತೊಡಗಿ ನಾಲ್ವರು ಕಡಬ ಪೊಲೀಸರ ಅತಿಥಿಗಳಾದ ಘಟನೆ ಠಾಣಾ ವ್ಯಾಪ್ತಿಯ ನಾಡೋಳಿ ಎಂಬಲ್ಲಿ ಶನಿವಾರದಂದು ನಡೆದಿದೆ.

ನಾಡೋಳಿಯಲ್ಲಿ ಹರಿಯುವ ಗುಂಡ್ಯ ನದಿಯ ದಡದಲ್ಲಿ ಕಡಬ ಸಮೀಪದ ಕಳಾರದ ಕೆಲವು ಯುವಕರು ಮಜಾ ಉಡಾಯಿಸುವಾಗ ಸಿಕ್ಕಿಬಿದ್ದಿದ್ದಾರೆ. ಮಹಿಳೆಯನ್ನು ಕೋಲಾರ ಮೂಲದವರೆಂದು ಹೇಳಲಾಗಿದ್ದು. ಈಕೆ ಕಲ್ಲಡ್ಕದಲ್ಲಿ ತನ್ನ ತಂಗಿಯ ಮದುವೆಗೆಂದು ದೇಣಿಗೆ ಸಂಗ್ರಹಿಸುತ್ತಿದ್ದ ವೇಳೆ ಕಳಾರದ ಯುವಕರ ಕಣ್ಣಿಗೆ ಬಿದ್ದಿದ್ದಾಳೆ. ಈಕೆಯನ್ನು ಪಟಾಯಿಸಿದ ಯುವಕರು ತಮ್ಮೂರಿನ ಹತ್ತಿರ ಹರಿಯುವ ಗುಂಡ್ಯ ನದಿಯಲ್ಲಿ ಮಜಾ ಉಡಾಯಿಸಲು ಕರೆದುಕೊಂಡು ಬಂದಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ಇವರ ಅನೈತಿಕ ಚಟುವಟಿಕೆ ಪ್ರಾರಂಭವಾಗಿತ್ತು. ಮಹಿಳೆಯೊಂದಿಗೆ ಒಬ್ಬೊಬ್ಬರೇ ಕಾಮಕೇಳಿ ನಡೆಸಿ ಹೊರ ಬರುತ್ತಿರುವುದನ್ನು ಕಂಡ ಸ್ಥಳೀಯ ಸಾಮಾಜಿಕ ಮುಖಂಡ ಮೋನಪ್ಪ ಗೌಡ ನಾಡೋಳಿಯವರು ಓರ್ವನಲ್ಲಿ ವಿಚಾರಿಸಿ ಕಡಬ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಬಂದ ಪೋಲೀಸರು ಯುವಕರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ತೆಗೆದುಕೊಂಡು ಯುವಕರ ಪೋಷಕರನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ.

Also Read  ಕಾರಿಂಜೇಶ್ವರ ಸನ್ನಿಧಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ ಸರಕಾರ..!

error: Content is protected !!
Scroll to Top