ಕಾಸರಗೋಡು :  ಬೀಡಿ ಕೆಲಸ ಮಾಡುತ್ತಿದ್ದ ಯುವಕ ಅಮೇರಿಕಾದಲ್ಲಿ ಜಡ್ಜ್ ಆಗಿ ಆಯ್ಕೆ..!!!                   

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.07. ಕಾಸರಗೋಡು ಮೂಲದ ಸುರೇಂದ್ರನ್ ಕೆ.ಪಟೇಲ್ ಅಮೆರಿಕಾದ 240ನೇ ಡಿಸ್ಟ್ರಿಕ್ಟ್​​ ಕೋರ್ಟ್​​ ಜಡ್ಜ್​​ ಆಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಸುರೇಂದ್ರನ್​​ ಅವರು ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿದ್ದು, ಕಾಸರಗೋಡಿನ ಬಳಾಲ್​​ ಎಂಬಲ್ಲಿ ಜನಸಿದ ಸುರೇಂದ್ರನ್ ವಕೀಲರಾಗುವ ಮುನ್ನ ಬೀಡಿ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಬಳಿಕ ಎಲ್.ಎಲ್.ಬಿ ಪದವಿ ಮುಗಿಸಿ​ ಕರ್ನಾಟಕದಲ್ಲೇ ಸುಮಾರು 10 ವರ್ಷಗಳ ವಕೀಲರಾಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ.

ಕಾಸರಗೋಡು ಮೂಲದ ಮಹಿಳೆಯೊಬ್ಬರು ದೆಹಲಿಯಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದರು. ಇವರನ್ನು ವಿವಾಹವಾದ ಬಳಿಕ ಸುರೇಂದ್ರನ್​​, ಸುಪ್ರೀಂಕೋರ್ಟ್​​ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಪತ್ನಿ ಜೊತೆ ಅಮೆರಿಕಾಗೆ ತೆರಳಿದ ಸುರೇಂದ್ರನ್​​, ಅಲ್ಲಿನ ಬಾರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಈಗ ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ‌ ಎಂದು ವರದಿ ತಿಳಿಸಿದೆ.

Also Read  ವಿಧಾನಸಭಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ.!

 

error: Content is protected !!
Scroll to Top