ಕ್ಷುಲ್ಲಕ ಕಾರಣಕ್ಕೆ ನಾಯಿಯನ್ನು ಶೂಟ್ ಮಾಡಿ ಕೊಂದ ಪಾಪಿಗಳು ➤ಇಬ್ಬರು ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.07. ಮಾಗಡಿ ಮುಖ್ಯರಸ್ತೆಯಲ್ಲಿ ನಗರದ ಹೊರವಲಯದಲ್ಲಿ ತಮ್ಮ ನಾಯಿಯನ್ನು ಕಚ್ಚಿದ್ದಕ್ಕೆ ಇಬ್ಬರು ಸೇರಿ ಇನ್ನೊಂದು ನಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಈ ಸಂಬಂಧ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರುದಾರರ ನಾಯಿಯು ಆರೋಪಿಗಳಲ್ಲಿ ಒಬ್ಬನ ನಾಯಿಯನ್ನು ಕಚ್ಚಿದೆ ಎಂದು ಹೇಳಲಾಗಿದ್ದು, ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಆದರೆ, ಆರೋಪಿಗಳು ನಾಯಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡಿದ್ದಾರೆ. ನಂತರ ಆರೋಪಿಗಳಿಬ್ಬರು ನಾಯಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ. ಆರೋಪಿಗಳಿಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನುಮಂತಯ್ಯ ಮತ್ತು ಮಂಜುನಾಥ್ ಅವರನ್ನು ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ. ನಾಯಿಯನ್ನು ಕೊಲ್ಲಲು ಬಳಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  ವಿಧಾನಸಭೆಯಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದ ಶಾಸಕರು

 

error: Content is protected !!
Scroll to Top