ಹಲ್ಲಿನಿಂದ 15,730 ಕೆ.ಜಿ ಭಾರವುಳ್ಳ ಟ್ರಕ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ವ್ಯಕ್ತಿ…! ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಈಜಿಪ್ಟ್, ಜ. 07. ವ್ಯಕ್ತಿಯೋರ್ವ ತನ್ನ ಹಲ್ಲುಗಳ ಸಹಾಯದಿಂದ ಬರೋಬ್ಬರಿ 15,730 ಕೆ.ಜಿ ಭಾರವುಳ್ಳ ಟ್ರಕ್ ಎಳೆದು ಗಿನ್ನೆಸ್ ದಾಖಲೆ ಮಾಡಿದ ಕುರಿತು ಈಜಿಪ್ಟ್ ನಿಂದ ವರದಿಯಾಗಿದೆ.


ಅಶ್ರಫ್ ಸುಲೈಮಾನ್ ಎಂಬಾತ ತನ್ನ ಹಲ್ಲುಗಳ ಸಹಾಯದಿಂದ ಎಳೆಯುತ್ತಿರುವ ವೀಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. ಟ್ರಕ್‌ ಗೆ ಹಗ್ಗ ಕಟ್ಟಿ ಕೇವಲ ಹಲ್ಲುಗಳ ಸಹಾಯದಿಂದ ಟ್ರಕ್‌ನ್ನು ವ್ಯಕ್ತಿ ಎಳೆದಿದ್ದಾನೆ. ಈ ಟ್ರಕ್ 15,730 ಕೆಜಿ ಭಾರ ಹೊಂದಿದೆ. ಎರಡು ದಿನಗಳ ಹಿಂದೆ ಈ ವೀಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದೆ.

Also Read  ದುಬೈನಿಂದ ಆಗಮಿಸಿದ ವೇಳೆ ಶಂಕಿತ ಕೊರೋನಾ ವೈರಸ್ ಪತ್ತೆ ಹಿನ್ನೆಲೆ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಪರಾರಿ

error: Content is protected !!
Scroll to Top