ಭಾರತ-ಲಂಕಾ ನಡುವಿನ 2 ನೇ ಟಿ20 ಪಂದ್ಯ ➤ 16 ರನ್ ಗಳ ಜಯ ಗಳಿಸಿದ ಲಂಕಾ

(ನ್ಯೂಸ್ ಕಡಬ) newskadaba.com, ಪುಣೆ, ಜ. 06.  ಭಾರತ- ಲಂಕಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 16 ರನ್ ಗಳ ಜಯ ದಾಖಲಿಸಿದೆ. ಲಂಕಾ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ 207 ರನ್ ಗಳ ಬೃಹತ್ ಗುರಿ ನೀಡಿತ್ತು.

 

9 ನೇ ಓವರ್‌ ವೇಳೆಗೆ 57 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಗೆಲುವಿನ ಆಸೆ ಮರೀಚಿಕೆಯಾಗಿತ್ತು. ಆದರೆ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಜೊತೆಯಾಟದ ಪರಿಣಾಮ ಭಾರತದ ಗೆಲುವಿನ ಆಸೆ  ಜೀವಂತವಾಗಿತ್ತು. 41 ಎಸೆತಗಳಲ್ಲಿ ಅಕ್ಷರ್ ಪಟೇಲ್ ಹಾಗೂ ಸೂರ್ಯ ಕುಮಾರ್ ಯಾದವ್ ಅವರ  91 ರನ್‌ ಜೊತೆಯಾಟದ ಪರಿಣಾಮ ಭಾರತ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಭಾರತ 8 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಸೋಲು ಅನುಭವಿಸಿತು.

Also Read  ಬಂಗಾರದ ದರದಲ್ಲಿ ಮತ್ತೆ ಏರಿಕೆ

error: Content is protected !!
Scroll to Top