ವಾಹನ ಪಲ್ಟಿ ➤ ನಾಲ್ವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಜ. 05. ಶವಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದ ಕಾರಡಗಿ ರಸ್ತೆಯ ತಿರುವಿನಲ್ಲಿ ಸಂಭವಿಸಿದೆ.

ಗಂಭೀರ ಗಾಯಗೊಂಡವರನ್ನು ಚಾಲಕ ಮುಸ್ತಾಕ್ ಅಹಮದ್ ಚೀಲಪಟೇದ (27), ಲಾಲ್ ಸಾಬ್ ಬುಡ್ಡಿಮನಿ (62), ಮೆಹಬೂಸಾದ್ ಕುಂದಗೋಳ (52), ರಹಬ್ಬಾನಿ ಹವಾಲ್ದಾರ್ (52) ಎಂದು ಗುರುತಿಸಲಾಗಿದೆ. ಇವರು ಕುಂದಗೋಳ ತಾಲೂಕಿನ ಕಮಡೊಳ್ಳಿ ಸವಣೂರು ಮಾರ್ಗವಾಗಿ ಹಾವೇರಿ ತಾಲೂಕಿನ ಹಂದಿಗನೂರ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

Also Read  ರಾಜ್ಯ ವಿಧಾನ ಸಭೆಯ ಚುನಾವಣೆಯ ಹಿನ್ನಲೆ ➤ಪ್ರಸಿದ್ಧ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ..!

error: Content is protected !!
Scroll to Top