ರಾಜ್ಯದಲ್ಲಿ ಮತ್ತೆ ಐಟಿ ದಾಳಿ ➤ ಮಾಜಿ ಶಾಸಕರ ಆಪ್ತರ ಮನೆಯ ಮೇಲೆ ದಾಳಿ

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಜ. 05. ರಾಜ್ಯದಲ್ಲಿ ಆಗಾಗ ಕೇಳಿ ಬರುತ್ತಿರುವ ಐಟಿ ಸದ್ದು ಮತ್ತೊಮ್ಮೆ ಮೊಳಗಿದ್ದು, ಚಿತ್ರದುರ್ಗದ ಜಿಲ್ಲೆಯಲ್ಲಿ ರಾಜ್ಯದ ಮಾಜಿ ಸಚಿವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದಲ್ಲಿನ ಜಿಲ್ಲಾ ಕಾಂಗ್ರೆಸ್​ ಕಾರ್ಯದರ್ಶಿ ಪಾಡಿಗಟ್ಟೆ ಸುರೇಶ್ ಮತ್ತು ಆತನ ಸಹೋದರ, ಗುತ್ತಿಗೆದಾರನೂ ಆಗಿರುವ ತಿಪ್ಪೇಸ್ವಾಮಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಹುಬ್ಬಳ್ಳಿಯಿಂದ ಬಂದು ದಾಳಿ ನಡೆಸಿದ್ದು, ಸುರೇಶ್ ಮನೆಯಲ್ಲಿ ದಾಳಿ ನಡೆಸಿದೆ. ಆದಾಯಕ್ಕೆ ಮೀರಿದ ಹಣ ಹಾಗೂ ಆಸ್ತಿ ಗಳಿಕೆ ಮಾಹಿತಿಯನುಸಾರ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

Also Read  ಫೀಸ್ ಕಟ್ಟದ ಮಕ್ಕಳನ್ನು ಫೇಲ್ ಮಾಡುವಂತಿಲ್ಲ ➤ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಡಕ್ ಸೂಚನೆ

error: Content is protected !!
Scroll to Top