➤ ಮನೆ ಸೆಕ್ಯುರಿಟಿಯಿಂದಲೇ ಕಳ್ಳತನ ➤ ನೇಪಾಳಕ್ಕೆ ಪರಾರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.5  ರಾಜಧಾನಿ ಬೆಂಗಳೂರಿನಲ್ಲಿ ನೇಪಾಳಿ ಮೂಲದವರೇ ಸೆಕ್ಯುರಿಟಿ ಸಿಬ್ಬಂದಿಯಾಗಿರುತ್ತಾರೆ.  ಇದೀಗ ಇಂತಹುವುದೇ ಒಂದು ಘಟನೆ ಬೆಳಕಿಗೆ ಬಂದಿದೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲ್ಡನ್ ಬೆಲ್ ಅಪಾರ್ಟ್​​ಮೆಂಟ್​​ನಲ್ಲಿ ಕಳ್ಳತನ ನಡೆದಿದೆ.

ಕಳೆದ 9 ವರ್ಷಗಳಿಂದ ಗೋಲ್ಡನ್ ಬೆಲ್ ಅಪಾರ್ಟ್​​ಮೆಂಟ್​​ನಲ್ಲಿ ನೇಪಾಳ ಮೂಲದ ಶಿವರಾಜ್ ಮತ್ತು ಜಯಂತಿ ದಂಪತಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದರು. ಅಪಾರ್ಟ್​​ಮೆಂಟ್​​ನಲ್ಲಿಯ ನಿವಾಸಿಗಳ ಮಾಹಿತಿ ದಂಪತಿಗೆ ಗೊತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ದಂಪತಿ ಫ್ಲ್ಯಾಟ್​​ಗೆ ನುಗ್ಗಿ ಕಳ್ಳತನಗೈದು ಪರಾರಿಯಾಗಿದ್ದಾರೆ.

ಹಣ, 230 ಗ್ರಾಂ ಚಿನ್ನಾಭರಣ 2 ಲ್ಯಾಪ್ ಟಾಪ್ ಕದ್ದು, ದಂಪತಿ ನೇಪಾಳಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿವೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ವಿಧಾನಪರಿಷತ್ ಘರ್ಷಣೆಗೆ ಕಾರಣದ ಬಗ್ಗೆ ಚರ್ಚೆಯಾಗಬೇಕು ➤ ಮಾಜಿ ಸಚಿವ ರಮಾನಾಥ ರೈ

error: Content is protected !!
Scroll to Top