ರೈತರಿಗೆ ಗುಡ್ ನ್ಯೂಸ್ !! ➤ ಬಿಳಿ ಜೋಳ ಖರೀದಿ ಮಿತಿ ಹೆಚ್ಚಳ ಸಾಧ್ಯತೆ        

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.05. ಮಾರುಕಟ್ಟೆಯಲ್ಲಿ ಜೋಳದ ದರ ಕುಸಿತವಾಗಿದ್ದು, ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದು, ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆ ಯೋಜನೆಯಡಿ ಹೈಬ್ರಿಡ್ ಜೋಳ, ಬಿಳಿ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಅನುಸಾರ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಅಂತಿಮ ಆದೇಶ ಹೊರ ಬೀಳಬೇಕಿದೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಸೂಚನೆ ನೀಡಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಕ್ವಿಂಟಲ್ ಗೆ 2,200 ರೂ.ಗೆ ಕುಸಿತ ಕಂಡಿದೆ. ಜೋಳದ ಕೊಯ್ಲು ಆರಂಭವಾಗಿರುವ ಹೊತ್ತಲ್ಲೇ ಮಾರುಕಟ್ಟೆಯಲ್ಲಿ ದರ ಕುಸಿತವಾದ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶಕ್ಕೆ ಮುಂದಾಗಿದೆ.

Also Read  ದಾಂಪತ್ಯ ಜೀವನದಲ್ಲಿ ಮುಳುವಾಗುವ ಜನಗಳನ್ನು ಉಚ್ಚಾಟಿಸುವ ತಂತ್ರ

ಎಂ.ಎಸ್.ಪಿ.ಯಡಿ ಎರಡು ಲಕ್ಷ ಕ್ವಿಂಟಲ್ ಬಿಳಿ ಜೋಳ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕನಿಷ್ಠ ಹೈಬ್ರಿಡ್ ಜೋಳಕ್ಕೆ 2970 ರೂ., ಮಾಲ್ದಂಡಿ ಬಿಳಿ ಜೋಳಕ್ಕೆ 2990 ರೂಪಾಯಿ(ಬೆಂಬಲ ಬೆಲೆಯ ಪ್ರಕಾರ) ದರ ನಿಗದಿ ಮಾಡಿದ್ದು, ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ರೈತರು ಹೊಂದಿರುವ ಹಿಡುವಳಿ ಆಧಾರದಲ್ಲಿ ಖರೀದಿ ಮಿತಿ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

error: Content is protected !!
Scroll to Top