(ನ್ಯೂಸ್ ಕಡಬ) newskadaba.com ಮೈಸೂರು, ಜ.05. ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆವರಣದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಸಿ.ಎಫ್.ಟಿ.ಆರ್.ಐ ಆವರಣದಲ್ಲಿರುವ ಕಾಡು ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಕೆ.ಆರ್.ರಸ್ತೆಯಿಂದ ಹುಣಸೂರು ರಸ್ತೆ ವರೆಗೂ ಹರಡಿಕೊಂಡಿರುವ ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಸಾಕಷ್ಟು ಹಸಿರು ವಲಯ ಇದೆ.
ಇಲ್ಲಿ ಸಿ.ಎಫ.ಟಿ.ಆರ್.ಐ ಶಾಲೆಯೂ ಇದ್ದು ಈ ಶಾಲೆಯ ಬಳಿ ಎರಡು ಚಿರತೆಗಳು ಸಂಚರಿಸುತ್ತಿದ್ದನ್ನು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ನೋಡಿದ್ದಾರೆ ಎನ್ನಲಾಗಿದೆ. ಕೂಡಲೇ ಈ ಕರ್ತವ್ಯ ಸಿಬ್ನಂದಿ ಸಿ.ಎಫ್.ಟಿ.ಆರ್.ಐ ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳಿಗೂ ವಿಷಯ ಮುಟ್ಟಿಸಲಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣ ಆರಂಭಿಸಿದ್ದು, ಬೋನುಗಳನ್ನು ಹಾಕಿದ್ದಾರೆ ಎಂದು ವರದಿ ತಿಳಿಸಿದೆ.