(ನ್ಯೂಸ್ ಕಡಬ) newskadaba.com ನವದೆಹಲಿ, ಜ.4. ತೆಲುಗು ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ 3ನೇ ಮದುವೆ ಆಗಲಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ, 2007 ರಲ್ಲಿ ಸಿರೀಶ್ ಭಾರಧ್ವಾಜ್ ಎಂಬವರನ್ನು ಪ್ರೀತಿಸಿ ವಿಮಾಹವಾಗಿದ್ದರು. ಈ ದಂಪತಿಗೆ ನಿವ್ರತಿ ಎನ್ನುವ ಮಗಳಿದ್ದಳು. ಕೆಲ ಕಾರಣಗಳಿಂದ 2011 ರಲ್ಲಿ ಜೋಡಿ ದೂರವಾಗಿದ್ದರು.
2016 ರಲ್ಲಿ ಉದ್ಯಮಿ ಕಲ್ಯಾಣ್ ದೇವ್ ರನ್ನು ಮದುವೆಯಾಗಿದ್ದರು ಇವರಿಗೆ ನವಿಷ್ಕಾ ಎನ್ನುವ ಮಗಳಿದ್ದಾರೆ. ಸರಿಯಾಗಿಯೇ ಇದ್ದ ಶ್ರೀಜಾ ಮತ್ತು ಕಲ್ಯಾಣ್ ದೇವ್ ಇತ್ತೀಚೆಗೆ ಬೇರೆಯಾಗಿದ್ದಾರೆ. 2023 ರ ನ್ಯೂ ಇಯರ್ ಸಂಭ್ರಮದ ವೇಳೆ ಇನ್ ಸ್ಟಾದಲ್ಲಿ ವಿಡಿಯೋವೊಂದು ಪೋಸ್ಟ್ ಮಾಡಿದ್ದಾರೆ. ನನ್ನ ಜೀವನದಲ್ಲಿ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡಿದೆ. ನನ್ನ ಬಗ್ಗೆ ತುಂಬಾ ಅರಿತಿರುವ, ಪ್ರೀತಿಸುವ ವ್ಯಕ್ತಿಯಾಗಿದ್ದಾರೆ ಎಂದುಬರೆದುಕೊಂಡಿದ್ದು, ಮೂರನೆಯ ಮದುವೆ ಸುಳಿವು ನೀಡಿದ್ದಾರೆ.