(ನ್ಯೂಸ್ ಕಡಬ) newskadaba.com ಕಡಬ, ಡಿ.08. ಮೆಸ್ಕಾಂ ಕಡಬ ಉಪವಿಭಾಗದ ಸಹಾಯಕ ಅಭಿಯಂತರರಾಗಿ (ತಾಂತ್ರಿಕ ವಿಭಾಗ) ಸಜಿಕುಮಾರ್ ಹಾಗೂ ಮೆಸ್ಕಾಂ ಕಡಬ ಶಾಖೆಯ ಕಾರ್ಯ ಮತ್ತು ಪಾಲನಾ ಶಾಖೆ ಸಹಾಯಕ ಅಭಿಯಂತರರಾಗಿ ಬಳ್ಳಾರಿಯ ಈರನ ಗೌಡ ಎಂಬವರು ನೇಮಕಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸಜಿಕುಮಾರ್ ರವರು ಈ ಹಿಂದೆ ನೆಲ್ಯಾಡಿ, ಕಡಬ ಶಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಸಹಾಯಕ ಅಭಿಯಂತರರಾಗಿ ಭಡ್ತಿಗೊಂಡು ಬೆಳ್ತಂಗಡಿ ನಗರ ಶಾಖೆಗೆ ವರ್ಗಾವಣೆಗೊಂಡಿದ್ದರು. ಇದೀಗ ಮತ್ತೆ ಕಡಬ ಉಪವಿಭಾಗಕ್ಕೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಡಬ ಶಾಖೆಯ ಕಾರ್ಯ ಮತ್ತು ಪಾಲನಾ ಶಾಖೆಗೆ ಸಹಾಯಕ ಅಭಿಯಂತರರಾಗಿ ಬಳ್ಳಾರಿಯ ಈರನ ಗೌಡ ಎಂಬವರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.