ಮಂಗಳೂರು: ಶ್ವಾನ ದಳದ ‘ಜ್ವಾಲಾ’ ಮೃತ್ಯು..!

 (ನ್ಯೂಸ್ ಕಡಬ) newskadaba.com ಮಂಗಳೂರು, ಜ.04.  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ನ ಶ್ವಾನ ದಳದ ಏಳು ವರ್ಷ ಹತ್ತು ತಿಂಗಳು ಪ್ರಾಯದ ಹೆಣ್ಣು ನಾಯಿ ‘ಜ್ವಾಲಾ’ ಮೂತ್ರಪಿಂಡದ ಸಮಸ್ಯೆಯಿಂದಾಗಿ ಮಂಗಳವಾರ ಮೃತಪಟ್ಟಿದೆ ಎಂದು ವರದಿಯಾಗಿದೆ. ಅಂತಿಮ ಗೌರವ ಸಲ್ಲಿಸಿ ಅದರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ’ಜ್ವಾಲಾ’ ಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎನ್ನಲಾಗಿದೆ.

‘ಡಾಬರ್ ಮನ್ ಪಿಂಚೆರ್ ತಳಿಯಾದ ಜ್ವಾಲಾ ಅಪರಾಧ ಪತ್ತೆ ಕಾರ್ಯದಲ್ಲಿ ಪೊಲೀಸರಿಗೆ ನೆರವಾಗುತ್ತಿತ್ತು. ಜೀವಮಾನ ಪೂರ್ತಿ ಅದು ಇಲಾಖೆಗೆ ಸೇವೆ ಸಲ್ಲಿಸಿದೆ. ಕುಮಾರ ಕತ್ಲೇರ ಅವರು ಈ ನಾಯಿಯನ್ನು ನೋಡಿಕೊಳ್ಳುತ್ತಿದ್ದರು ಎಂದು ಹೃಷಿಕೇಶ್ ಸೋನಾವಣೆ ತಿಳಿಸಿದರು.

Also Read  ದಕ್ಷಿಣ ಕೊಡಗಿನಲ್ಲಿ ವಿಪರೀತ ಆನೆ ಹಾವಳಿ  ➤ ಸಂಕಷ್ಟದಲ್ಲಿ ರೈತರು              

 

error: Content is protected !!
Scroll to Top