ಮಹಿಳೆಯರು ಸ್ವ ಉದ್ಯೋಗ ಮಾಡಲು ಸ್ವಸಹಾಯ ಸಂಘಕ್ಕೆ ಅಧಿಕ ಸಾಲ ➤ ಎಂ.ಎನ್. ರಾಜೇಂದ್ರ ಕುಮಾರ್

ನ್ಯೂಸ್ ಕಡಬ) newskadaba.com, ಸಿದ್ದಾಪುರ, ಡಿ. 23.  ಮಹಿಳೆಯರು ಸ್ವಾವಲಂಬಿಗಳಾಗಿ ಪುರುಷರ ಹಿಡಿತದಿಂದ ಹೊರಬಂದು  ಸ್ವ ಉದ್ಯೋಗ ಮಾಡಲು, ಸ್ವತಂತ್ರ ಬದುಕು ಕಟ್ಟಿ ಕೊಳ್ಳಲು ಸ್ವ ಸಹಾಯ ಸಂಘಗಳಿಗೆ ಅಧಿಕ ಸಾಲವನ್ನು ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್  ಸಿದ್ದಾಪುರ ಶಾಖೆಯ ನೂತನ ಕಟ್ಟಡ  ಉತ್ಕೃಷ್ಠದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮಗೆ ಪಹಣೆ ಪತ್ರಕ್ಕಿಂತ ಮಹಿಳೆಯರ ಮೇಲಿರುವ ನಂಬಿಕೆಯೇ ಮುಖ್ಯ ಸಹಕಾರಿ ಕ್ಷೇತ್ರದಲ್ಲಿ ದೊರಕುವ ಸೇವೆ ವಾಣಿಜ್ಯ ಬ್ಯಾಂಕ್ ಗಳಲ್ಲಿ ಸಿಗುವುದಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ಸಹಕಾರಿ ಕ್ಷೇತ್ರ ಈಗ ತಲುಪುತ್ತಿದೆ ಎಂದರು. ಎಸ್ ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಶಂಕರ್ ಶೆಟ್ಟಿ, ಸಹಕಾರಿ ಕ್ಷೇತ್ರದ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Also Read   ಹುಡುಗಿಯರನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ

error: Content is protected !!
Scroll to Top