ದೆಹಲಿ ಅಪಘಾತ ಪ್ರಕರಣಕ್ಕೆ ತಿರುವು       ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ..!!!           

(ನ್ಯೂಸ್ ಕಡಬ) newskadaba.com  ನವದೆಹಲಿ, ಜ.03. ದೆಹಲಿಯ ಸುಲ್ತಾನಪುರಿಯಲ್ಲಿ  ಸಂಭವಿಸಿದ ಕಾರು-ಸ್ಕೂಟಿ ಅಪಘಾತ ಪ್ರಕರಣಕ್ಕೆ ಇದೀಗ ಹೊಸ ತಿರುವೊಂದು ಸಿಕ್ಕಿದ್ದು, ಅಪಘಾತ ಸಂದರ್ಭದಲ್ಲಿ ಮೃತಳಾದ ಯುವತಿಯ ಜತೆಯಲ್ಲಿ ಮತ್ತೊಬ್ಬ ಯುವತಿ ಇದ್ದಳು ಎಂಬುದಾಗಿ ಹೇಳಲಾಗುತ್ತಿದೆ.

ಮೃತಳಾದ ಯುವತಿ ಹಾಗೂ ಆಕೆಯ ಸ್ನೇಹಿತೆ ಹೋಟೆಲ್ ಒಂದರಲ್ಲಿ ಬರ್ತ್‌ಡೇ ಪಾರ್ಟಿಗೆಂದು ತೆರಳಿದ್ದರು ಎನ್ನಲಾಗಿದೆ. ಅಲ್ಲಿಂದ ಇಬ್ಬರೂ ಒಟ್ಟಿಗೆ ಸ್ಕೂಟಿಯಲ್ಲಿ ಬಂದಿದ್ದು, ಆಗ ಈ ಅಪಘಾತ ಸಂಭವಿಸಿದೆ. ಒಬ್ಬ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಕೆ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನೊಬ್ಬ ಯುವತಿಯ ಕಾಲು ಕಾರಿನ ಚಕ್ರಕ್ಕೆ ಸಿಲುಕಿಕೊಂಡ ಹಿನ್ನೆಲೆ ಆಕೆಯನ್ನು ಕಾರು ಎಳೆದುಕೊಂಡು ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.

Also Read  ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ ➤ ಇಂದಿನಿಂದಲೇ ನೂತನ ದರ ಜಾರಿ

 

error: Content is protected !!
Scroll to Top