ಬೈಕಿಗೆ ಬಸ್ಸು ಢಿಕ್ಕಿ ➤ವಿದ್ಯಾರ್ಥಿ ಮೃತ್ಯು..!

ನ್ಯೂಸ್ ಕಡಬ) newskadaba.com. ಕಟೀಲು,  . 03: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಹಿಂಬದಿ ಸವಾರ ಬಾಲಕ ಮೃತಪಟ್ಟ ಘಟನೆ ಕಟೀಲು ಸಮೀಪದ ಉಲ್ಲಂಜೆಯಲ್ಲಿ ನಡೆದಿದೆ. ಕಲ್ಲಂಜೆ ಶಾಲಾ ಸಮೀಪದ ನಿವಾಸಿ ಚರಣ್ (14) ಮೃತ ಬಾಲಕ. ಕಟೀಲು ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ಚರಣ್ ನಿಲ್ಲಿಸಿ ಲಿಫ್ಟ್ ಕೇಳಿದ್ದಾನೆ.

ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದಾಗ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಬರುತ್ತಿದ್ದ ಬಸ್‌ ಉಲ್ಲಂಜೆ ಜುಮಾದಿ ಗುಡ್ಡೆ ಬಳಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಚರಣ್‌ ರಸ್ತೆಗೆ ಎಸೆಯಲ್ಪಟ್ಟು ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾನೆ. ಸವಾರ ಎಡ ಬದಿ ಬದಿಗೆ ಎಸೆಯಲ್ಪಟ್ಟ ಕಾರಣ ಬದುಕುಳಿದಿದ್ದಾರೆ.

Also Read  ವಶಪಡಿಸಿಕೊಂಡ ಡ್ರಗ್ಸ್ ಪೊಲೀಸರಿಂದಲೇ ಮಾರಾಟ..!!

ಮೃತ ಬಾಲಕನ ತಂದೆ ಗಣೇಶ್‌ ಕಿನ್ನಿಗೋಳಿಯ ಮಿಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಬಾಲಕ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾನೆ.

error: Content is protected !!
Scroll to Top