ರಸ್ತೆ ಗುಂಡಿಗೆ ಬಿದ್ದು ಆಟೋ ಪಲ್ಟಿ➤ ಸವಾರ ಬಚಾವ್

(ನ್ಯೂಸ್ ಕಡಬ) newskadaba.com, ಬೆಂಗಳೂರು.  . 03.  ನಗರದಲ್ಲಿನ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಅನೇಕರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಅಪಾರ ಜೀವ ಹಾನಿಯಾಗುತ್ತಿದ್ದರು  ಬಿಬಿಎಂಪಿ ಮಾತ್ರ ಸಂಪೂರ್ಣವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವಲ್ಲಿ ವಿಫಲಗೊಂಡಿದೆ. ರಸ್ತೆ ಮಧ್ಯೆ ಇದ್ದ ಗುಂಡಿಗೆ ಬಿದ್ದ ಆಟೋವೊಂದು ಪಲ್ಟಿ ಘಟನೆ ನಗರದ ಬನ್ನೇರುಘಟ್ಟ ಹಾಗೂ ಅಂಜನಪುರ ರಸ್ತೆಯಲ್ಲಿ ನಡೆದಿದೆ.

ಜನವರಿ 2ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಂಜನಪುರದ‌ 80 ಫೀಟ್ ರಸ್ತೆಯಲ್ಲಿ ಆಟೋ ಪಲ್ಟಿಯಾಗಿದೆ. ರಸ್ತೆಗೆ ಬಿದ್ದ ಆಟೋ ಚಾಲಕನನ್ನು ಸಾರ್ವಜನಿಕರು ಕೂಡಲೇ ಮೇಲಕ್ಕೆತ್ತಿದ್ದು, ಅದೃಷ್ಟವಶಾತ್ ಯಾವುದೇ‌ ಪ್ರಾಣ ಹಾನಿ ಸಂಭವಿಸಿಲ್ಲ. ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ‘ಡಿ’ವರ್ಗ ಸರಕಾರಿ ನೌಕರರ ವಾರ್ಷಿಕ ಮಹಾಸಭೆ

error: Content is protected !!
Scroll to Top