ಮಡಿಕೇರಿ : ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣ ➤ ಆರೋಪಿಗೆ ಚಾಕುವಿಂದ ಇರಿತ      

(ನ್ಯೂಸ್ ಕಡಬ) newskadaba.com  ಕೊಡಗು, ಜ.03. ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿದಿರುವ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ. ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಸ್ ಚಾಕು ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಅಬ್ದುಲ್ ರೆಹಮಾನ್ ಹಾಗೂ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್ ಎಂಬವರ ನಡುವೆ ಕಳೆದ 10 ವರ್ಷಗಳಿಂದ ವೈಯುಕ್ತಿಕ ದ್ವೇಷವಿತ್ತು. ಇವರಿಬ್ಬರ ವಾಟ್ಸಾಪ್ ಮೂಲಕ ದಿನಾ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಕೋಪಗೊಂಡಿದ್ದ ಹ್ಯಾರಿಸ್, ರಾಣಿಪೇಟೆಯಲ್ಲಿ ನಿಲ್ಲಿಸಲಾಗಿದ್ದ ಅಬ್ದುಲ್ ರೆಹಮಾನ್ ಅವರ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧನವಾದ ಒಂದೇ ದಿನದಲ್ಲಿ ಹ್ಯಾರಿಸ್ ಜಾಮೀನು ಪಡೆದು ಹೊರಬಂದಿದ್ದ ಎಂದು ತಿಳಿದುಬಂದಿದೆ. ಹ್ಯಾರಿಸ್ ಕುತ್ತಿಗೆಗೆ ಅಬ್ದುಲ್  ರೆಹಮಾನ್ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಹ್ಯಾರೀಸ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.

Also Read  ಈರುಳ್ಳಿ ಬೆಲೆ ಏಕಾಏಕಿ ಕುಸಿತ..!➤ಕಂಗಾಲಾದ ರೈತರು

 

 

error: Content is protected !!
Scroll to Top