ನಡೆದಾಡುವ ದೇವರು ಖ್ಯಾತಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ..!

(ನ್ಯೂಸ್ ಕಡಬ) newskadaba.com ವಿಜಯಪುರ, ಜ. 02. ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು ಸೋಮವಾರದಂದು ತಡರಾತ್ರಿ ದೈವಾಧೀನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಸ್ವಾಮೀಜಿಯವರಿಗೆ ವೈದ್ಯರು ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಚಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ಈ ಹಿನ್ನೆಲೆ ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಯ ವೈದ್ಯರ ತಂಡ ಸ್ವಾಮೀಜಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರು.

Also Read  ಶಾಂಪಿಗ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಕೋಟಿ-ಕೋಟಿ ಹಣ ಲೂಟಿ.!➤ಮಾಜಿ ಶಾಸಕಿ ವಿರುದ್ಧ ಹಾಲಿ ಶಾಸಕ ದೂರು

error: Content is protected !!
Scroll to Top