ಪಿಎಸ್.ಎಸ್.ಕೆ ಕಾರ್ಖಾನೆಗೆ ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಭೇಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು ಜ. 02. ಪಾಂಡವಪುರ ಮುರುಗೇಶ್ ಆರ್. ನಿರಾಣಿ ಒಡೆತನದ ಎಂಆರ್ ಎನ್ ಸಂಸ್ಥೆ ಗುತ್ತಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಪಿಎಸ್.ಎಸ್.ಕೆ ಕಾರ್ಖಾನೆಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಭೇಟಿ ನೀಡಿದರು.

 

ಪಾಂಡವಪುರ ಮಾರ್ಗವಾಗಿ ಪ್ರವಾಸ ತೆರಳುವಾಗ ಮಧ್ಯೆ ಕಾರ್ಖಾನೆ ನೋಡಿದ ತಕ್ಷಣ ವಾಹನದಿಂದ ಇಳಿದು ಪತಿ ನಾರಾಯಣಮೂರ್ತಿ ಹಾಗೂ ಸ್ನೇಹಿತರೊಡನೆ ಭೇಟಿ ನೀಡಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆ ಸಿಜೆಎಂ ಶಿವಾನಂದ ಸಲಗಾರ, ಕಾರ್ಖಾನೆ ಮುಖ್ಯಸ್ಥ ಶಿವಾನಂದ ಯರಗಟ್ಟಿ, ಕಬ್ಬು ವಿಭಾಗದ ಮುಖ್ಯಸ್ಥ ರವಿ, ಸತೀಶ್ ಗೌಡ ಮುಂತಾದವರು ಜೊತೆ ಇದ್ದರು.

Also Read  ➤➤ಸಂಚಾರಿ ವಾಹನದ ಮೂಲಕ ಕಲಾಜಾಥ ಚಾಲನೆ

error: Content is protected !!