ಹೆಲಿಕಾಪ್ಟರ್ ಮಧ್ಯೆ ಡಿಕ್ಕಿ…!!  ➤ ನಾಲ್ವರು ಮೃತ್ಯು, ಮೂವರ ಸ್ಥಿತಿ ಚಿಂತಾಜನಕ 

(ನ್ಯೂಸ್ ಕಡಬ) newskadaba.com ಆಸ್ಟ್ರೇಲಿಯ, ಜ. 02. ಎರಡು ಹೆಲಿಕಾಪ್ಟರ್‌ಗಳ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ನ ದಕ್ಷಿಣದಲ್ಲಿರುವ ಗೋಲ್ಡ್ ಕೋಸ್ಟ್ ಮೇನ್ ಬೀಚ್‌ ನ ಪ್ರವಾಸೋದ್ಯಮ ತಾಣದಲ್ಲಿ ವರದಿಯಾಗಿದೆ.

ಎರಡು ಹೆಲಿಕಾಪ್ಟರ್‌ ಗಳು, ಡಿಕ್ಕಿಯಾಗಿ ಸೀ ವರ್ಲ್ಡ್ ರೆಸಾರ್ಟ್‌ನಿಂದ ಹೊರಗಿರುವ ಮರಳಿನ ದಂಡೆಯ ಮೇಲೆ ಬಿದ್ದವು. ತುರ್ತು ಸೇವೆಗಳು ಕರಾವಳಿಯಿಂದ ದೂರದಲ್ಲಿರುವ ಮರಳು ದಂಡೆಗೆ ಪ್ರವೇಶಿಸಲು ಕಷ್ಟಕರವಾಗಿದೆ. ಆದರೂ ಕಾರ್ಯಾಚರಣೆ ಆರಂಭವಾಗಿದೆ ಎಂದು ಆಗ್ನೇಯ ಪ್ರದೇಶದ ಪ್ರಾದೇಶಿಕ ಕರ್ತವ್ಯ ಅಧಿಕಾರಿ ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಇನ್‌ಸ್ಪೆಕ್ಟರ್ ಗ್ಯಾರಿ ವೊರೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

Also Read  ಹೆಜ್ಜೇನು ಕಡಿತ: ವ್ಯಕ್ತಿ ಮೃತ್ಯು..!

 

error: Content is protected !!
Scroll to Top