2022ರಲ್ಲಿ ಅತ್ಯಂತ ಖುಷಿ ಕೊಟ್ಟ ಪುಸ್ತಕ- “ಅರಿವು” ➤ ಅನಂತ ಸುಬ್ರಹ್ಮಣ್ಯ ಶರ್ಮಾ

(ನ್ಯೂಸ್ ಕಡಬ) newskadaba.com ಜ. 02. “ಅರಿವು” ಪುಸ್ತಕದೊಳಗಿನ ಅನುಭವ ಹಾಗೂ ಮಾಹಿತಿಪೂರ್ಣ ಲೇಖನಗಳು “ಬಾಯಿ  ಕ್ಯಾನ್ಸರ್” ಬಗ್ಗೆ ನನ್ನ ಅರಿವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಒಬ್ಬ ಸಮಾಜಜೀವಿ ಮನುಷ್ಯನಾಗಿ ಹೇಗೆ ಬಾಳಬೇಕೆನ್ನುವ ಹೊಣೆಗಾರಿಕೆಯ ಅರಿವನ್ನೂ ಹೆಚ್ಚಿಸಿತು. ಬಹುಪಾಲು ಸ್ವಯಂಕೃತ ದುಶ್ಚಟಗಳಿಂದಲೇ ಬರುವ ಭಯಾನಕ ರೋಗವನ್ನು ಹೇಗೆ ಪ್ರತಿಯೊಬ್ಬರೂ ಚಟಮುಕ್ತ ಜೀವನಶೈಲಿಯಲ್ಲಿ ಬದುಕುವುದರೊಂದಿಗೆ ತಡೆಗಟ್ಟಬಹುದೆಂದು ಡಾ|ಚೂಂತಾರು ಅವರು ಅತ್ಯಂತ ಕಾಳಜಿಯಿಂದ ಮನದಟ್ಟಾಗುವಂತೆ ಬರೆದಿದ್ದಾರೆ. ನಮಗರಿವಿಲ್ಲದಂತೆ ರೋಗದ ಲಕ್ಷಣಗಳು ಕಂಡುಬಂದಲ್ಲಿ ಎದೆಗುಂದದೆ ಯಾವ ರೀತಿ ಎದುರಿಸಿ ಗುಣಪಡಿಸಬಹುದೆಂದು ಸವಿವರವಾಗಿ ಸಾಂತ್ವನದ ಮರ‍್ಗರ‍್ಶನ ಮಾಡಿದ್ದಾರೆ. ವೈದ್ಯರು ಆರೋಗ್ಯಪರ‍್ಣ ಸಮಾಜಕ್ಕಾಗಿ “ಅರಿವು” ಎಂಬ ಬೆಣ್ಣೆಯನ್ನು ನಮ್ಮೆಲ್ಲರ ಕೈಗೆ ನೀಡಿರುವುದಕ್ಕೆ ಧನ್ಯವಾದಗಳು. ಅದನ್ನು ಓದಿ ತುಪ್ಪವನ್ನಾಗಿಸಿ ಉಂಡು ಆರೋಗ್ಯಕರ ಜೀವನದ ರುಚಿ ಸವಿಯುವುದು ನಮ್ಮೆಲ್ಲರ ಜವಾಬ್ದಾರಿ. ಆಗಲೇ ಇಂತಹ ಒಳ್ಳೆಯ ಪುಸ್ತಕಕ್ಕೆ ಸರ‍್ಥಕತೆ ಮತ್ತು ಸಮಾಜಮುಖಿ ಲೇಖಕ ಡಾ| ಚೂಂತಾರು ಅವರ ಶ್ರಮ ಸೇವೆಗಳಿಗೆ ಪರಿರ‍್ತನಪೂರಕ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ.

error: Content is protected !!
Scroll to Top