ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಇರಿದು ಕೊಂದ ಪಾಪಿ ಮಗಳು…!! 

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜ. 02. ಪ್ರೇಮ ವಿವಾಹ ನಿರಾಕರಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಅಪ್ರಾಪ್ತ ಮಗಳೊಬ್ಬಳು ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ವರದಿಯಾಗಿದೆ.

ಮೃತ ಮಹಿಳೆಯನ್ನು ಮಮತಾ ಕುಶ್ವಾಹಾ ಎಂದು ಗುರುತಿಸಲಾಗಿದೆ. ಮಮತಾ ಅವರ ಮಗಳು ಕಳೆದ ಕೆಲ ಸಮಯದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಈ ಸಂಬಂಧಕ್ಕೆ ತಾಯಿ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆ ಈ ಕೃತ್ಯವನ್ನು ಎಸಗಿದ್ದಾಳೆ ಎನ್ನಲಾಗಿದೆ. ಅಲ್ಲದೇ ಮಮತಾಳ ಮಗಳನ್ನು ಆಕೆಯ ಪ್ರಿಯಕರ ಕೆಲ ಸಮಯದ ಹಿಂದೆ ಅಪಹರಿಸಿ, ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ದೂರು ದಾಖಲಾಗಿತ್ತು. ಆ ಬಳಿಕ ಯುವಕ ಜೈಲು ಸೇರಿ ಹೊರ ಬಂದಿದ್ದ. ಆದರೆ ನನಗೆ ಆತನೇ ಬೇಕೆಂದು ಹಟ ಮಾಡಿ ಕುಳಿತಿದ್ದ ಮಗಳು, ತನ್ನ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ, ಚಾಕುವಿನಿಂದ ತಿವಿದು ಹೆತ್ತ ತಾಯಿಯ ಪ್ರಾಣವನ್ನೇ ತೆಗೆದು ಬಳಿಕ ಶವವನ್ನು ಬೆಡ್‌ ನಡಿಯಲ್ಲಿಟ್ಟು, ಪ್ರಿಯಕರನೊಂದಿಗೆ ರಾತ್ರಿ ಕಳೆದಿದ್ದಾಳೆ ಎನ್ನಲಾಗಿದೆ.

Also Read  ಜಮ್ಮು-ಕಾಶ್ಮೀರ: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧನ ಮೃತದೇಹ ಪತ್ತೆ..!

 

 

error: Content is protected !!
Scroll to Top