ಹೊಸ ವರ್ಷಕ್ಕೆ ಬಿಗ್ ಶಾಕ್ ➤ ವಾಣಿಜ್ಯ ಸಿಲಿಂಡರ್ ದರ 25 ರೂ. ಹೆಚ್ಚಳ..!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 02. 19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್‌ ಗಳ ಬೆಲೆ ಪ್ರತಿ ಸಿಲಿಂಡರ್ ಮೇಲೆ 25 ರೂಪಾಯಿ ಏರಿಕೆಯಾಗಿದೆ. ಇದು ಜನವರಿ 1ರಿಂದಲೇ ಅನ್ವಯವಾಗಿದೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರ ರಾಜಧಾನಿ ದಿಲ್ಲಿಯಲ್ಲಿ 1,769ಕ್ಕೆ ಏರಿಕೆಯಾಗಿದೆ. 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ಮುಂಬಯಿಯಲ್ಲಿ 1,721 ರೂ ಇದ್ದರೆ, ಕೋಲ್ಕತಾದಲ್ಲಿ 1,870 ಮತ್ತು ಚೆನ್ನೈ ನಗರದಲ್ಲಿ 1,971 ರೂಪಾಯಿ ಇದೆ.

Also Read  ಕಡಬ: ಅಕ್ರಮ ಜಾನುವಾರು ಸಾಗಾಟ- ಪಿಕಪ್ ಹಾಗೂ ಜಾನುವಾರು ಪೊಲೀಸ್ ವಶಕ್ಕೆ

 

 

 

error: Content is protected !!
Scroll to Top