ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಹಲವು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ಡಿ.06. ನಂದಿನಿ ಸಭಾಭವನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಂಪನಕಟ್ಟೆ ಮಂಗಳೂರಿನಲ್ಲಿ ಡಿ.2 ಮತ್ತು 3 ರಂದು ನಡೆದ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಇವರು ನಡೆಸಿದ ಶಿಟೊ-ರ್ಯೂ ಕರಾಟೆ-ಡೋ 10ನೇ ವೆಸ್ಟರ್ನ್ಸ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ 2017 ರಲ್ಲಿ ಭಾಗವಹಿಸಿದ ಕ್ನಾನಾಯ ಜ್ಯೋತಿ ವಿದ್ಯಾರ್ಥಿಗಳಾದ ದೀಪಕ್ ಗೌಡ ಪಿ. ಬ್ಲಾಕ್ ಬೆಲ್ಟ್‌ನಲ್ಲಿ ದ್ವಿತೀಯ, ಚರಣ್ ಪಿ.ಎಚ್ ಬ್ರೌನ್ ಬೆಲ್ಟ್‌ನಲ್ಲಿ ಪ್ರಥಮ, ಅಶ್ವೀದ್ ಬ್ರೌನ್ ಬೆಲ್ಟ್‌ನಲ್ಲಿ ದ್ವಿತೀಯ, ಆಕಾಶ್ ವರ್ಗೀಸ್ ಓರೆಂಜ್ ಬೆಲ್ಟ್‌ನಲ್ಲಿ ದ್ವಿತೀಯ ಹಾಗೂ ಸುಮಂತ್ಕೃಷ್ಣ ಬ್ರೌನ್ ಬೆಲ್ಟ್‌ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ತರಬೇತಿ ನೀಡಿರುತ್ತಾರೆ.

Also Read  ನ. 18 ರಂದು ಕೆ.ಎಂ.ಎಫ್. ವತಿಯಿಂದ ಕೌಶಲ್ಯಾಭಿವೃದ್ಧಿ ದಿನಾಚರಣೆ

error: Content is protected !!
Scroll to Top