ಸ್ಕೂಟಿ – ಕಾರು ನಡುವೆ ಡಿಕ್ಕಿ ➤ ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 02. ಕಾರು ಹಾಗೂ ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವತಿ ಮೃತಪಟ್ಟ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

 

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ, ಯುವತಿಯೊಬ್ಬಳ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಆಕೆಯ ಬಟ್ಟೆ ಕಾರಿಗೆ ಸಿಕ್ಕಿ ಆಕೆಯನ್ನು ಕಾರು 4 ಕಿ.ಮೀ.ವರೆಗೂ ಎಳೆದುಕೊಂಡು ಹೋಗಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು  ಆ ಯುವತಿ ಮೃತಪಟ್ಟಿದ್ದಳು.  ಹೊಸ ವರ್ಷದಂದು ನಡೆದ ಈ ಅಮಾನವೀಯ ಘಟನೆಯ ಬಗ್ಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ದೆಹಲಿಯ ಪೊಲೀಸ್ ಆಯುಕ್ತರು ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Also Read  ಪೋಖ್ರಾನ್‌ನಲ್ಲಿ ಸೇನಾ ಕ್ಷಿಪಣಿ ಮಿಸ್‌ಫೈರ್ ➤ ತನಿಖೆಗೆ ಆದೇಶ

error: Content is protected !!
Scroll to Top