ದೆವ್ವ ಬಿಡಿಸುವ ನೆಪದಲ್ಲಿ ಅತ್ಯಾಚಾರವೆಸಗಿದ ಮಂತ್ರವಾದಿ…! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜ. 02. ಮಂತ್ರವಾದಿಯೋರ್ವ ದೆವ್ವ ಬಿಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಂಧಿತನನ್ನು ಅಶೋಕ್ ಕುಮಾರ್ ಎಂಸು ಗುರುತಿಸಲಾಗಿದೆ. ಈ ಬಾಲಕಿಯು ಕಳೆದ 3 ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಯಾವುದೇ ಪ್ರಯೋಜನ ಕಂಡುಬಂದಿರಲಿಲ್ಲ. ಇತ್ತ ಮನೆಯಲ್ಲಿ ಬಾಲಕಿಯ ತಂದೆ ಇಲ್ಲದ ವೇಳೆ ಬಂದ ಮಂತ್ರವಾದಿ ಅಶೋಕ್ ಕುಮಾರ್, ದೆವ್ವ ಹಾಗೂ ದುಷ್ಟಶಕ್ತಿಗಳನ್ನು ಹೋಗಲಾಡಿಸಲು ಆಕೆಯನ್ನು ತನ್ನೊಂದಿಗೆ ಕಳುಹಿಸುವಂತೆ ಆಕೆಯ ತಾಯಿಯ ಬಳಿ ಹೇಳಿಕೊಂಡಿದ್ದ. ಬಳಿಕ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಮಂತ್ರವಾದಿ ಅತ್ಯಾಚಾರ ಎಸಗಿದ್ದಾನೆ. ವಿಷಯ ತಿಳಿದ ಬಾಲಕಿಯ ತಂದೆಯು ನೀಡಿದ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಕಮೆಂಟ್‌ - ವಾಟ್ಸಾಪ್‌ ಅಡ್ಮಿನ್‌ ಅರೆಸ್ಟ್‌

error: Content is protected !!
Scroll to Top