ವಿಕಲಚೇತನರ ಬಸ್ ಪಾಸ್ ಫೆಬ್ರುವರಿ 28ರವರೆಗೆ ಮಾನ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2022ನೇ ಸಾಲಿಗೆ ವಿತರಿಸಿರುವ ವಿಕಲಚೇತನರ ಬಸ್ ಪಾಸುಗಳನ್ನು 2023ರ ಫೆಬ್ರವರಿ 28ರ ವರೆಗೆ ಮಾನ್ಯಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಪಾಸ್ ನವೀಕರಣ ಹಾಗೂ ಹೊಸ ಪಾಸ್ ಪಡೆಯುವ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://serviceonline.gov.in/karnataka/  ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ ಹಾಗೂ ಯು.ಡಿ.ಐ.ಡಿ, ಗುರುತಿನ ಚೀಟಿಯನ್ನು   ಆನ್‍ ಲೈನ್‍ನಲ್ಲಿ ಅಪ್ ಲೋಡ್ ಮಾಡಿ ಆಯಾ ತಾಲೂಕಿನ ಘಟಕದಲ್ಲಿ ಪಾಸ್‍ ಗಳನ್ನು ಪಡೆಯಬೇಕು. ಹೊಸದಾಗಿ ಪಾಸ್ ಪಡೆಯುವವರು ಸಲ್ಲಿಸಿರುವ ಅರ್ಜಿಯ ಪ್ರತಿ, ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‍ ಪೋರ್ಟ್ ಸೈಜ್ ಫೋಟೋ 2, ಅಂಚೆ ಚೀಟಿ ಗಾತ್ರದ ಫೋಟೋ 1 ಹಾಗೂ ಯು.ಡಿ.ಐ.ಡಿ, ಗುರುತಿನ ಚೀಟಿ ಹಾಗೂ 660 ರೂ. ಪಾವತಿಸಿ ಪುತ್ತೂರಿನ ವಿಭಾಗೀಯ ಕಚೇರಿಯಿಂದ ಪಾಸ್ ಪಡೆಯುವಂತೆ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪೇರಡ್ಕ: ನೂತನ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಕೆ ಹಮೀದ್ ರವರಿಗೆ ಸನ್ಮಾನ

 

error: Content is protected !!
Scroll to Top