ಮಂಗಳೂರು: ರನ್ ವೇ ರಿ-ಕಾರ್ಪೆಟಿಂಗ್ ➤ ಜ. 27ರಿಂದ ಮೇ. 31ರ ವರೆಗೆ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಇಲ್ಲಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಮರುಕಾರ್ಪೆಟಿಂಗ್ ಮಾಡುವ ಕಾರಣದಿಂದ ನಾಲ್ಕು ತಿಂಗಳುಗಳ ಕಾಲ (ರವಿವಾರ ಮತ್ತು ರಾಷ್ಟ್ರೀಯ ರಜಾ ದಿನಗಳನ್ನುಹೊರತುಪಡಿಸಿ) ಏರ್ ಲೈನ್ ಗಳು ಬೆಳಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 6 ಗಂಟೆಯ ನಂತರ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

ಬೆಳ್ಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿಮಾಣ ನಿಲ್ದಾಣದ ರನ್ ವೇ ಮುಚ್ಚಲಿದೆ. 2,450 ಮೀ ಉದ್ದ ಮತ್ತು 45 ಮೀಟರ್ ಅಗಲದ ಕಾಂಕ್ರೀಟ್ ರನ್ ವೇ 06/24 ಅನ್ನು ಮೇ 2006 ರಲ್ಲಿ ಸಂಚಾರಕ್ಕಾಗಿ ತೆರೆಯಲಾಗಿತ್ತು, ಇದು ಎರಡು ರನ್ ವೇ ಗಳನ್ನು ಹೊಂದಿರುವ ಕರ್ನಾಟಕ ಮೊದಲ ಮತ್ತು ಕಟ್ಟುನಿಟ್ಟಾದ ಪಾದಚಾರಿ ಅಥವಾ ಕಾಂಕ್ರೀಟ್ ರನ್ ವೇ ಹೊಂದಿರುವ ಮೊದಲ ವಿಮಾನ ನಿಲ್ದಾಣವಾಗಿದೆ.

Also Read  ಮಂಗಳೂರು ನಗರ ಪೊಲೀಸ್ ಘಟಕದಲ್ಲಿ ವಾಹನಗಳ ಬಿಡಿಭಾಗಗಳ ಹರಾಜು

error: Content is protected !!
Scroll to Top