ವಿಕಲಚೇತನರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕೇಂದ್ರ ಸರ್ಕಾರದಿಂದ 2022ನೇ ಸಾಲಿಗೆ ನ್ಯಾಷನಲ್ ಇ-ಸ್ಕಾಲರ್‍ ಶಿಪ್ ಯೋಜನೆಯಡಿ, ಪ್ರಿ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿಕಲಚೇತನ ವಿದ್ಯಾರ್ಥಿ ವೇತನಕ್ಕೆ ಆನ್‍ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೂಲಕ ವೆಬ್ ಸೈಟ್: https://ssp.prematric.karnataka.gov.in ಅಲ್ಲಿ ಆಯಾ ತಾಲೂಕಿನ  ವಿ.ಆರ್.ಡಬ್ಲ್ಯೂ ಎಂ.ಆರ್.ಡಬ್ಲೂ ಹಾಗೂ ಯು.ಆರ್.ಡಬ್ಲೂಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ತಾವೇ ನೇರವಾಗಿ ಕಚೇರಿಯಲ್ಲಿ 2023ನೇ ಜನವರಿ 15 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕಿನ ಜಯಪ್ರಕಾಶ್ ಮೊ.ಸಂಖ್ಯೆ: 9110897458, ಬಂಟ್ವಾಳ ತಾಲೂಕಿನ ಗೀರೀಶ್ ಮೊ.ಸಂಖ್ಯೆ: 9164645616, ಪುತ್ತೂರು ತಾಲೂಕಿನ ನವೀನ್ ಮೊ.ಸಂಖ್ಯೆ: 9686682251, ಸುಳ್ಯ ತಾಲೂಕಿನ ಚಂದ್ರಶೇಖರ ಮೊ.ಸಂಖ್ಯೆ: 815300057, ಕಡಬ ತಾಲೂಕಿನ ಅಕ್ಷತಾ ಮೊ.ಸಂಖ್ಯೆ: 7899579773, ಬೆಳ್ತಂಗಡಿ ತಾಲೂಕಿನ ಜಾನ್ ಮೊ.ಸಂಖ್ಯೆ: 7975199473 ಹಾಗೂ 0824-2455999 ಮೂಲಕ ಆಯಾ ತಾಲೂಕಿನ ಎಂ.ಆರ್ ಡಬ್ಲ್ಯೂಗಳು ಅಥವಾ ಇಲಾಖೆಯ ವೆಬ್‍ ಸೈಟ್: www.disabilityaffairs.gov.in  ನಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top