2024ರ ಮಾರ್ಚ್ ಒಳಗೆ ಜನೌಷಧಿ ಕೇಂದ್ರ 10,000ಕ್ಕೆ ವಿಸ್ತರಣೆ ➤ ಕೇಂದ್ರ ಚಿಂತನೆ!

(ನ್ಯೂಸ್ ಕಡಬ) newskadaba.com ನವದೆಹಲಿ, ಜ.2 ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 2024ರ ಮಾರ್ಚ್ ಒಳಗಾಗಿ 10,000ಕ್ಕೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ. ಗುಣಮಟ್ಟದ ಔಷಧ ಕೈಗೆಟಕುವ ದರದಲ್ಲಿ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಕಳೆದ 8 ವರ್ಷಗಳಲ್ಲಿ 18,000 ಕೋಟಿ ರೂ. ಉಳಿತಾಯವಾಗಿದೆ. ದೇಶದಾದ್ಯಂತ 743 ಜಿಲ್ಲೆಗಳಲ್ಲಿ 9,000 ಜನೌಷಧ ಕೇಂದ್ರಗಳನ್ನು ತೆರೆಯುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

Also Read  ನಿಗೂಢ ಶಂಕೆ ➤ ದಂಪತಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಗ್ರಾಮಸ್ಥರು

ಭಾರತೀಯ ಜನೌಷಧ ಕೇಂದ್ರಗಳಲ್ಲಿ ಔಷಧಗಳನ್ನು ಮಾರುಕಟ್ಟೆ ಮಾರಾಟ ದರಕ್ಕಿಂತ ಶೇಕಡಾ 50ರಿಂದ 90ರ ವರೆಗೂ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 1,759ರಷ್ಟು ಔಷಧಗಳು, 280 ಶಸ್ತ್ರಚಿಕಿತ್ಸೆ ಉಪಕರಣಗಳು ಜನೌಷಧ ಕೇಂದ್ರಗಳಲ್ಲಿ ಲಭ್ಯವಿವೆ.

error: Content is protected !!
Scroll to Top