ಜಾನುವಾರು ಕಳ್ಳತನ ಆರೋಪದಲ್ಲಿ ಥಳಿಸಿ ಕೊಲೆ..!!                               

(ನ್ಯೂಸ್ ಕಡಬ) newskadaba.com ಜಾರ್ಖಂಡ್, ಜ. 02. ಗುಂಪು ಥಳಿತ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಹೊಡೆದು ಕೊಲೆ ಮಾಡಿದ ಘಟನೆ ಜಾರ್ಖಂಡ್ ನ ಗಿರಿಧ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ಸಿಮಾರಿಯಾ ನಿವಾಸಿ ವಿನೋದ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಜಾನುವಾರುಗಳನ್ನು ಕದಿಯಲು ಬಿರಾಲಾಲ್ ತುಡು ಎಂಬವರ ಗೋಶಾಲೆಗೆ ಪ್ರವೇಶಿಸಿದ್ದ ಎಂದು ಆರೋಪಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬಿರಾಲಾಲ್ ಆಡು ಹಾಗೂ ದನಗಳನ್ನು ಮನೆಯ ಒಳಗೆ ಕಟ್ಟಿ ಹಾಕಿದ್ದ. ವಿನೋದ್ ಆಡುಗಳನ್ನು ಬಿಚ್ಚಿದಾಗ ಜಾನುವಾರುಗಳು ಕೂಗಲು ಆರಂಭಿಸಿದವು. ಹೊರಗಡೆ ಬರಲು ಯತ್ನಿಸಿದ್ದ ಆದರೆ, ಹೊರಗಡೆಯಿಂದ ಲಾಕ್ ಹಾಕಲಾಗಿತ್ತು. ಬಿರಾಲಾಲ್ ಬಾಗಿಲು ಮುರಿದು ಹೊರಬಂದಿದ್ದು, ನಂತರ ಇಬ್ಬರ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

Also Read  ? ಮಂಗಳೂರು: ಹನ್ನೆರಡರ ಬಾಲಕನ ಕೊಲೆಗೈದ ದುಷ್ಕರ್ಮಿಗಳು

 

 

error: Content is protected !!
Scroll to Top