ಕೊಲ್ಲರಕೋಡಿ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬ ಪ್ರಯುಕ್ತ ► ಬೃಹತ್ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.06. ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲರಕೋಡಿ ಹಳೆವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಯೇನಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಕೊಲ್ಲರಕೋಡಿ ಶಾಲಾ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರವು ಇತ್ತೀಚೆಗೆ ನಡೆಯಿತು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ನರಿಂಗಾನ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಉದ್ಯಮಿ ಮುಸ್ತಾಫ ಎಸ್.ಎಂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಮುಖಂಡರಾದ ಡಾ. ಮುನೀರ್ ಬಾವ, ಅಸ್ಗರ್ ಅಲಿ ಮುಡಿಪು, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಾಕೋಡಿ, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಉರ್ಣಿ ಮಂಜೇಶ್ವರ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ, ಯೆನೆಪೋಯ ಕಾಲೇಜಿನ ಡಾ. ರೇಣುಕ, ಡಾ. ಗಾಝಾನಾ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಿದ್ದೀಕ್ ಪಾರೆ, ಗೌರವ ಸಲಹೆಗಾರ ಪೇಮಾನಂದ ರೈ, ಕೋಶಾಧಿಕಾರಿ ವಿಜಾಯನಂದ ರೈ, ಸಂಘಟನಾ ಕಾರ್ಯದರ್ಶಿ ಅಶ್ರಫ್ ಎಸ್.ಎಚ್, ಕಾರ್ಯದರ್ಶಿ ಚೇತನ್ ಶೆಟ್ಟಿ, ಜೆಡಿಎಸ್ ಮುಖಂಡ ಮೊೈದೀನ್ ಶಿಹಾಬ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Also Read  ಬಂಟ್ವಾಳ: ಕಾರು ಢಿಕ್ಕಿ ➤ ಚಾಲಕ ಮೃತ್ಯು..!!

ಅಗತ್ಯಕ್ಕೆ ತಕ್ಕಂತೆ ರಕ್ತವನ್ನು ಹೊಂದಿಸಿಕೊಡುತ್ತಿದ್ದ ಯೆನೆಪೋಯ ಅಸ್ಪತ್ರೆಯ ಶಾನಿ ಪಿ. ಸಾಜಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

error: Content is protected !!
Scroll to Top