(ನ್ಯೂಸ್ ಕಡಬ) newskadaba.com ನವದೆಹಲಿ, ಜ 02. ಮಕ್ಕಳ ಲೈಂಗಿಕ ಶೋಷಣೆ ಮತ್ತು ಅನುಮತಿಯಿಲ್ಲದ ನಗ್ನತೆಯನ್ನು ಉತ್ತೇಜಿಸಿದಕ್ಕಾಗಿ ಸುಮಾರು 45,589 ಟ್ವಿಟರ್ ಖಾತೆಗಳನ್ನು ನಿಷೇಧಿಸಿ, ಅದರ ಜೊತೆಗೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 3,035 ಖಾತೆಗಳನ್ನು ತೆಗೆದುಹಾಕಿ, ಭಾರತದಲ್ಲಿ ಒಟ್ಟು 48,624 ಖಾತೆಗಳನ್ನು ಟ್ವಿಟರ್ ನಿಷೇಧಿಸಿರುವ ಕುರಿತು ವರದಿಯಾಗಿದೆ.
2021 ರ ಹೊಸ ಐಟಿ ನಿಯಮಗಳ ಪ್ರಕಾರ, ಟ್ವಿಟರ್, ಮಾಸಿಕ ವರದಿಯಲ್ಲಿ ತನ್ನ ಕುಂದುಕೊರತೆ ಹಾಗೂ ಪರಿಹಾರ ಕಾರ್ಯವಿಧಾನಗಳ ಮೂಲಕ ಭಾರತದ ಬಳಕೆದಾರರಿಂದ 755 ದೂರುಗಳನ್ನು ಸ್ವೀಕರಿಸಿತ್ತು. ಅದರಲ್ಲಿ 121 ದೂರುಗಳ ಮೇಲೆ ಕ್ರಮ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.