ಹೊಸ ವರ್ಷಾಚರಣೆ ಪಾರ್ಟಿ ವೇಳೆ ಗೆಳೆಯನಿಗೆ ಚೂರಿ ಇರಿತ  ➤ ಆರೋಪಿ ಅರೆಸ್ಟ್                                    

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 02. ಹೊಸ ವರ್ಷಾಚರಣೆಯ ಪಾರ್ಟಿ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಸ್ನೇಹಿತನೊಬ್ಬ ತನ್ನ ಗೆಳೆಯನಿಗೆ ಚಾಕುವಿನಿಂದ ಇರಿದಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.


ಗಾಯಾಳುವನ್ನು ಪೀಣ್ಯ 4ನೇ ಬ್ಲಾಕ್ ನಿವಾಸಿ ಪ್ರಶಾಂತ್ ಎ (30) ಎಂದು ಗುರುತಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ. ಚೂರಿಯಿಂದ ಇರಿದ ಪ್ರಶಾಂತ್ (31) ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಮದ್ಯ ಸೇವಿಸಿದ್ದು, ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರಶಾಂತ್ ಸ್ನೇಹಿತನಿಗೆ ಇರಿದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Also Read  4 ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ- 7 ಮಂದಿ ಶಿಕ್ಷಕರು ಪೊಲೀಸ್ ವಶಕ್ಕೆ

 

error: Content is protected !!
Scroll to Top