ಬೆಳ್ತಂಗಡಿ: ಹೊಸ ವರ್ಷದ ಮೊದಲ ದಿನವೇ ಭೀಕರ ಅಪಘಾತ ➤ ಬಸ್ – ಇನ್ನೋವಾ ಢಿಕ್ಕಿ: ಕರಾವಳಿಯ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.01. ಹೊಸ ವರ್ಷದ ಮೊದಲ ದಿನವೇ ದಕ್ಷಿಣ ಕನ್ನಡದಲ್ಲಿ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಮೂಡುಬಿದಿರೆಯಿಂದ ಬೆಳ್ತಂಗಡಿ ಮಾರ್ಗವಾಗಿ ಉಪ್ಪಿನಂಗಡಿಗೆ ತೆರಳುತ್ತಿದ್ದ ಖಾಸಗಿಬಸ್ ಹಾಗೂ ಇನ್ನೋವಾ ಕಾರಿನ ನಡುವೆ ವೇಣೂರು ಸಮೀಪದ ಗೋಳಿಯಂಗಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ನ ಅಧ್ಯಕ್ಷರಾದ ನೌಶಾದ್ ಸೂರಲ್ಪಾಡಿ ಹಾಗೂ ಕಾರು ಚಾಲಕ ಮುಷರ್ರಫ್ ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಶಿಥಿಲಗೊಂಡ ಮನೆಯಲ್ಲಿ ಮತದಾನ ಮಾಡಿದ 104 ವರ್ಷದ ವೃದ್ಧೆ..!​ ➤ ಚರ್ಚೆಗೆ ಗ್ರಾಸವಾಯಿತು ಜಿಲ್ಲಾಧಿಕಾಯ ಫೇಸ್‌ಬುಕ್ ಪೋಸ್ಟ್.!​

 

error: Content is protected !!
Scroll to Top