ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ➤ 50 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಭಡ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಇಲ್ಲಿನ ನಗರ ಪೊಲೀಸ್ ಆಯುಕ್ತರು ಸೇರಿದಂತೆ 50 ಐಪಿಎಸ್ ಅಧಿಕಾರಿಗಳನ್ನು ಬಡ್ತಿ ಹಾಗೂ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಅಗ್ನಿ ಶಾಮಕದಳ ಮತ್ತು ತುರ್ತು ಸೇವೆಗಳ ಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಅವರ ನಿವೃತ್ತಿಯಿಂದ ತೆರವಾಗಿದ್ದ ಡಿಜಿಪಿ ಹುದ್ದೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿಗೆ ಬಡ್ತಿ ನೀಡಿ, ಪೊಲೀಸ್ ಆಯುಕ್ತ ಹುದ್ದೆಯನ್ನು ಪದೋನ್ನತಿಗೊಳಿಸಿ ಮುಂದುವರಿಸಿದೆ. ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಮೋಹನ್ ಅವರನ್ನು ಅಗ್ನಿ ಶಾಮಕ ದಳದ ಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಅದೇ ರೀತಿ ಬೆಂಗಳೂರು ನಗರ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೇರಿದಂತೆ 28 ಎಸ್‌ಪಿ ದರ್ಜೆಯ ಅಧಿಕಾರಿಗಳಿಗೆ ಆಡಳಿತಾತ್ಮಕ ಹಿರಿತನ ಲಭ್ಯವಾಗಿದೆ.

ಎಡಿಜಿಪಿ ದರ್ಜೆಗೆ ಬಡ್ತಿ:-
ಮನೀಶ್ ಕರ್ಬೀಕರ್- ಕಾರಾಗೃಹ ಇಲಾಖೆ, ಸೌಮೆಂದು ಮುಖರ್ಜಿ- ಲ್ಯಾಜಿಸ್ಟಿಕ್ ಮತ್ತು ಕಂಪ್ಯೂಟರ್ ವಿಭಾಗ, ಕೇಂದ್ರ ಸೇವೆಯಲ್ಲಿರುವ ಪಂಕಜ್ ಕುಮಾರ್ ಠಾಕೂರ್.

Also Read  ಸಿಸಿಬಿ ಪೊಲೀಸರ ದಾಳಿ  ➤ ಫಾರ್ಮ್ ನಲ್ಲಿ 29 ವನ್ಯಜೀವಿಗಳು ಪತ್ತೆ    

ಐಜಿಪಿ ದರ್ಜೆಗೆ ಎಂ. ಚಂದ್ರಶೇಖರ್-ಹೆಚ್ಚುವರಿ ಆಯುಕ್ತ (ಪೂರ್ವ ವಿಭಾಗ) ಬೆಂಗಳೂರು, ಎನ್.ಸತೀಶ್ ಕುಮಾರ್ – ಈಶಾನ್ಯ ವಲಯ,

ಐಜಿಪಿ ಹುದ್ದೆಗೆ ರಮಣಗುಪ್ತ- ಉತ್ತರ ವಲಯ, ಡಾ.ಬಿ.ಆರ್. ರವಿಕಾಂತೇಗೌಡ- ಕೇಂದ್ರ ವಲಯ, ಎಸ್.ಎನ್. ಸಿದ್ದರಾಮಪ್ಪ- ಆಯುಕ್ತ ಸಾರಿಗೆ ಇಲಾಖೆ, ಬಿ.ಎಸ್. ಲೋಕೇಶ್- ಬಳ್ಳಾರಿ ವಲಯ, ಕೆ.ಟಿ. ಬಾಲಕೃಷ್ಣ -ಅಗ್ನಿ ಶಾಮಕದಳ, ಕೇಂದ್ರ ಸೇವೆಯಲ್ಲಿರುವ ಅಭಿಷೇಕ್ ಗೋಯೆಲ್ ಹಾಗೂ ಕೌಶಲೇಂದ್ರ ಕುಮಾರ್ ಮುಂಬಡ್ತಿ ಪಡೆದಿದ್ದಾರೆ.

ಡಿಐಜಿ ಹುದ್ದೆಗೆ
ಡಾ.ಎಸ್.ಡಿ. ಶರಣಪ್ಪ -ಸಿಸಿಬಿ ಜಂಟಿ ಆಯುಕ್ತ ಬೆಂಗಳೂರು, ಎಂ.ಎನ್.ಅನುಚೇತ್- ಜಂಟಿ ಆಯುಕ್ತ ಸಂಚಾರ ಬೆಂಗಳೂರು, ರವಿ.ಡಿ. ಚೆನ್ನಣ್ಣನವರ್- ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್, ಬಿ. ರಮೇಶ್- ಆಯುಕ್ತ ಮೈಸೂರು, ಇಡಾ ಮಾರ್ಟಿನ್- ಡಿಐಜಿ ನೇಮಕಾತಿ, ಕೇಂದ್ರ ಸೇವೆಯಲ್ಲಿರುವ ಅಧಿಕಾರಿಗಳಾದ ಬೋರೆಸ್ ಭೂಷಣ್, ಶಾಂತುನು ಸಿನ್ಹಾ, ಅಭಿನವ್ ಖರೆ ಹಾಗೂ ಸಿ. ವಂಶಿಕೃಷ್ಣ ಪದನ್ನೋತ್ತಿ ಪಡೆದು ಸೇವೆ ಮುಂದುವರಿಸಿದ್ದಾರೆ.

Also Read  ಯುವತಿ ಮೇಲೆ ಅತ್ಯಾಚಾರ..!     ಆರೋಪಿ ಅರೆಸ್ಟ್..!                     

error: Content is protected !!
Scroll to Top