ಹೊಸ ವರ್ಷದಿಂದ ಮೆಟ್ರೋ ಟಿಕೆಟ್‌ ಮೇಲೆ ಭಾರೀ ರಿಯಾಯಿತಿ                    

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಜನವರಿ 1 ರಿಂದ  ಮೆಟ್ರೋ ರೈಲ್ವೇ ಕಾರ್ಪೊರೇಷನ್‌ ಲಿಮಿಟೆಡ್‌, ಮಧ್ಯಮ ಮತ್ತು ದೊಡ್ಡ ಗುಂಪುಗಳಿಗೆ ಕ್ರಮವಾಗಿ ಶೇ. 15 ಮತ್ತು ಶೇ. 20ರಷ್ಟು ರಿಯಾಯಿತಿ ನೀಡುತ್ತಿದೆ ಎಂದು ವರದಿ ತಿಳಿಸಿದೆ.

ದೊಡ್ಡ ಗುಂಪು (1,000ಕ್ಕಿಂತ ಹೆಚ್ಚು) ಟಿಕೆಟ್‌ ಖರೀದಿ ಮಾಡಿ ಒಂದೇ ನಿಲ್ದಾಣದಲ್ಲಿ ಪ್ರವೇಶ ಪಡೆದು, ಎಲ್ಲರೂ ಒಂದೇ ನಿಲ್ದಾಣದಲ್ಲಿ ನಿರ್ಗಮಿಸಿದರೆ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತದೆ. 30 ರೂ. ಪ್ರತ್ಯೇಕವಾಗಿ ನೀಡಿ ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಿ, ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬಹುದು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು. ಮಧ್ಯಮ ಮತ್ತು ದೊಡ್ಡ ಗುಂಪಿನಲ್ಲಿ ಪ್ರಯಾಣಿಸಲು ಪ್ರಯಾಣದ ದಿನಾಂಕ, ಸಮಯ, ಪ್ರಯಾಣಿಕರ ಸಂಖ್ಯೆ, ಪ್ರವೇಶ ನಿಲ್ದಾಣ, ನಿರ್ಗಮನ ನಿಲ್ದಾಣ ಮತ್ತು ಪ್ರಯಾಣದ ಉದ್ದೇಶವನ್ನು ಸೂಚಿಸುವ ಮೂಲಕ, ಪ್ರಯಾಣದ ದಿನಾಂಕದಿಂದ ಕನಿಷ್ಠ 7 ದಿನಗಳ ಮುಂಚಿತವಾಗಿ ನಿಗಮಕ್ಕೆ ಬರಹದ ಮೂಲಕ ಮನವಿ ಸಲ್ಲಿಸಬೇಕು. ನಿಗಮವು ಪ್ರಯಾಣದ ವಿವರಗಳನ್ನು ಸೂಚಿಸುವ ಪತ್ರ ಅಥವಾ ಗುಂಪು ಟಿಕೆಟ್‌ಗಳನ್ನು ನೀಡುತ್ತದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಅಸೌಖ್ಯಕ್ಕೊಳಗಾಗಿ ಮೃತಪಟ್ಟ ವೃದ್ದೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆ ➤ ಜಿಲ್ಲೆಯಲ್ಲಿ 20ಕ್ಕೇರಿದ ಸಾವಿನ ಸಂಖ್ಯೆ

 

 

 

error: Content is protected !!
Scroll to Top