(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 31. ಪಡಿತರ ಅಂಗಡಿಗಳಲ್ಲಿ ಕುಚ್ಚಲಕ್ಕಿ ಲಭ್ಯಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಕೇರಳ ರಾಜ್ಯ ಸರಕಾರ ಮುಂದಾಗಿದ್ದು, ಇದಕ್ಕಾಗಿ ಎಲ್ಲ ಸಂಸದರ ಬೆಂಬಲವನ್ನು ಅಲ್ಲಿನ ಆರೋಗ್ಯ ಸಚಿವ ಜಿ. ಆರ್. ಅನಿಲ್ ಆಗ್ರಹಿಸಿದ್ದಾರೆ.
ಪಡಿತರ ವಿತರಣೆಗಾಗಿ ಕಳೆದ ಐದಾರು ತಿಂಗಳುಗಳಿಂದ ಕೇಂದ್ರದಿಂದ ಬೆಳ್ತಿಗೆ ಅಕ್ಕಿ ಲಭಿಸುತ್ತಿದ್ದು, ಡಿಸೆಂಬರ್ ನಲ್ಲಿ ಇದು ಶೇ. 80-90ರವರೆಗೆ ತಲುಪಿದೆ. ಮಾರ್ಚ್ ವರೆಗಿನ ವಿತರಣೆಗೆ ಎಫ್ ಸಿಐಯ ಗೋದಾಮುಗಳಲ್ಲಿ ಸಂಗ್ರಹಿಸಿರುವುದರಲ್ಲಿ ಬಹುತೇಕ ಬೆಳ್ತಿಗೆ ಅಕ್ಕಿಯ ದಾಸ್ತಾನೇ ಆಗಿದೆ. ಲೆಕ್ಕಾಚಾರ ಪ್ರಕಾರ 92.38 ಲಕ್ಷ ಪಡಿತರ ಚೀಟಿ ಮಾಲೀಕರಲ್ಲಿ 59.32 ಲಕ್ಷ ಮಂದಿ ಮಾತ್ರ ಪಡಿತರ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಇದು ಶೇ. 64 ಮಾತ್ರವಾಗಿದೆ. 33 ಲಕ್ಷದಷ್ಟು ಕಾರ್ಡ್ ಮಾಲೀಕರು ಪಡಿತರ ಸಾಮಗ್ರಿಗಳನ್ನು ಇನ್ನಷ್ಟೇ ಖರೀದಿಸಬೇಕು ಎಂದು ವರದಿ ತಿಳಿಸಿದೆ.