ಕಡಬ ಠಾಣೆಯ ಸ್ವಾಧೀನದಲ್ಲಿರುವ ವಿವಿಧ ವಾಹನಗಳ ಮಾಲಕರಿಗೆ ಸೂಚನೆ ► ವಾರದೊಳಗೆ ವಾಹನಗಳನ್ನು ಬಿಡಿಸದಿದ್ದಲ್ಲಿ ಬಹಿರಂಗ ಹರಾಜಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡ ನೋಂದಣಿಯಾಗದ ಬೈಕ್ ಸೇರಿ 9 ಬೈಕುಗಳು ಹಾಗೂ ಸ್ವಿಫ್ಟ್ ಕಾರಿನ ಮಾಲಕರಿಗೆ ವಾಹನಗಳನ್ನು ಮಾನ್ಯ ನ್ಯಾಯಾಲಯದೊಂದಿಗೆ ವ್ಯವಹರಿಸಿ ಬಿಡುಗಡೆಗೊಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದರೂ ಇದುವರೆಗೂ ಯಾವುದೇ ವಾಹನಗಳನ್ನು ಬಿಡುಗಡೆಗೊಳಿಸಿರುವುದಿಲ್ಲ.

ಈ ಪ್ರಕಟಣೆಯ ಒಂದು ವಾರದೊಳಗೆ ವಾಹನಗಳನ್ನು ಬಿಡುಗಡೆಗೊಳಿಸದೆ ಇದ್ದಲ್ಲಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸದ್ರಿ ವಾಹನಗಳನ್ನು ಬಹಿರಂಗ ಹರಾಜು ಹಾಕಲಾಗುವುದು ಎಂದು ಕಡಬ ಠಾಣಾ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಡಬ: ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತ್ಯು

error: Content is protected !!
Scroll to Top