ಅಕ್ರಮ ಚಿನ್ನ ಸಾಗಾಟ ➤ 532 ಗ್ರಾಂ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಗುದನಾಳದಲ್ಲಿಟ್ಟು ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಾಲ್ಡೀವ್ಸ್ ನಿಂದ ಬಂದಿಳಿದ ಪ್ರಯಾಣಿಕನನ್ನು ತೀವ್ರವಾಗಿ ತಪಾಸಣೆ ನಡೆಸಿದ ಅಧಿಕಾರಿಗಳು, ಗುದನಾಳದಲ್ಲಿ 3 ಅಂಡಾಕಾರದ ಪ್ಯಾಕೆಟ್‌ ಗಳಲ್ಲಿ ಘನ ಗಮ್‌ ನೊಂದಿಗೆ ಬೆರೆಸಿದ ಪೇಸ್ಟ್ ರೂಪದಲ್ಲಿ ಪ್ಯಾಕ್ ಮಾಡಿಟ್ಟಿದ್ದ ಸುಮಾರು 532.21 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 28,73,934 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಮನೆಯಲ್ಲಿ ನಕರಾತ್ಮಕ ಶಕ್ತಿಗಳು ವಾಮಾಚಾರ ಪ್ರಭಾವವಿದ್ದರೆ ತಪ್ಪದೇ ಈ ನಿಯಮವನ್ನು ಪಾಲಿಸಿ

error: Content is protected !!
Scroll to Top