(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 31. ಅನ್ಯ ಉದ್ದೇಶಗಳಿಗೆ ಆಧಾರ್ ಕಾರ್ಡ್ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವಂತೆ ವಿಶಿಷ್ಟ ಗುರುತಿನ ಪ್ರಾಧಿಕಾರ ದೇಶದ ನಾಗರಿಕರಿಗೆ ಸೂಚನೆ ನೀಡಿದ್ದು, ಸರಕಾರದ ಹಲವು ಸೌಲಭ್ಯ ಪಡೆಯುವ ಜತೆಗೆ ಬೇರೆ ಬೇರೆ ಸೇವೆ ಹಾಗೂ ಸೌಕರ್ಯ ಪಡೆದುಕೊಳ್ಳಲು ನಾಗರಿಕರು ಆಧಾರ್ ಕಾರ್ಡ್ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವಂತೆ ಯುಐಡಿಎಐ ಎಚ್ಚರಿಸಿದೆ.
ಆಧಾರ್ ಸಂಖ್ಯೆ ನೀಡುವಾಗ ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಜತೆಗೆ ಬ್ಯಾಂಕ್ ಅಕೌಂಟ್, ಮೊಬೈಲ್ ನಂಬರ್, ರೇಷನ್ ಕಾರ್ಡ್, ಪ್ಯಾನ್, ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ಆಧಾರ್ ಜತೆ ನೀಡಬೇಡಿ ಎಂದು ಪ್ರಾಧಿಕಾರ ಎಚ್ಚರಿಕೆಯ ಸಂದೇಶ ನೀಡಿದೆ.